Iduvarege

ಇದುವರೆಗೆ ಇಟ್ಟಿರದ ಮೊದಮೊದಲ ಹೆಜ್ಜೆಯಿದು
ಇದುವರೆಗೆ ಇಟ್ಟಿರದ ಮೊದಮೊದಲ ಹೆಜ್ಜೆಯಿದು
ಒಮ್ಮೆ ತಡವರಿಸುವೆ, ಒಮ್ಮೆ ಸರಿಹೋಗುವೆ
ಬೇರೇನೂ ಕೇಳಲ್ಲ ನಿನ್ನನ್ನು, ಒಂಚೂರು ಸಹಿಸಿಕೋ ನನ್ನನ್ನು

ಇದುವರೆಗೆ ಇಟ್ಟಿರದ ಮೊದಮೊದಲ ಹೆಜ್ಜೆಯಿದು
ಇದುವರೆಗೆ ಇಟ್ಟಿರದ ಮೊದಮೊದಲ ಹೆಜ್ಜೆಯಿದು

ಓ, ಓ, ಓ, ಓ, ಓ
ಓ, ಓ, ಓ, ಓ, ಹೋ
ಓ, ಓ, ಓ, ಹೋ, ಓ, ಓ, ಹೋ

ಅರ್ಧ ಮುಚ್ಚಿದ ಕಣ್ಣು ಪೂರ್ತಿ ತೆಗೆಯಲೇಬೇಡ
ಸತ್ತು ಸರಿಗಮದಂತೆ ಜಾಸ್ತಿ ಮಾತನಾಡಬೇಡ

ಇದುವರೆಗೂ ಮುಚ್ಚಿಟ್ಟ ಮೃದುಮಧುರ ಲಜ್ಜೆಯನು
ಯಾಕೆ ತಡೆದಿರಿಸುವೆ? ಯಾಕೆ ತಡಮಾಡುವೆ?
ಬೇರೇನೂ ಕೇಳಲ್ಲ ನಿನ್ನನ್ನು, ಮಿತಿಮೀರಿ ಬಳಸಿಕೋ ನನ್ನನ್ನು

ಇದುವರೆಗೆ ಇಟ್ಟಿರದ ಮೊದಮೊದಲ ಹೆಜ್ಜೆಯಿದು
ಇದುವರೆಗೆ ಇಟ್ಟಿರದ ಮೊದಮೊದಲ ಹೆಜ್ಜೆಯಿದು

ತುಂಡು ಪಿಸುಮಾತಲ್ಲಿ ಹೇಳುವೆನು ಬೇಡಿಕೆಯ
ಕ್ಷಮಿಸು ಬಿಳಗೆ ನನ್ನ ಬಿಸಿ ಉಸಿರ ಕೋರಿಕೆಯ

ಇದುವರೆಗೂ ಸತ್ತಿರದ ಜೀವಂತ ಮರಣವಿದು
ಹೀಗೆ ಕನವರಿಸುವೆ, ಹಾಗೆ ಬಡಬಡಿಸುವೆ
ಬೇರೇನೂ ಕೇಳಲ್ಲ ನಿನ್ನನ್ನು, ನಿಜವಾಗಿ ಬದುಕಿಸು ನನ್ನನ್ನು

ಇದುವರೆಗೆ ಇಟ್ಟಿರದ ಮೊದಮೊದಲ ಹೆಜ್ಜೆಯಿದು
ಇದುವರೆಗೆ ಇಟ್ಟಿರದ ಮೊದಮೊದಲ ಹೆಜ್ಜೆಯಿದು
ಒಮ್ಮೆ ತಡವರಿಸುವೆ, ಒಮ್ಮೆ ಸರಿಹೋಗುವೆ
ಬೇರೇನೂ ಕೇಳಲ್ಲ ನಿನ್ನನ್ನು, ಒಂಚೂರು ಸಹಿಸಿಕೋ ನನ್ನನ್ನು



Credits
Writer(s): Yogaraj Bhat, V Harikrishna
Lyrics powered by www.musixmatch.com

Link