Kere Yeri

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ
ಯಾರ್ ಬಿತ್ತಿಲ್ಲ ಬೆಳೆದಿಲ್ಲ ಎದೆ ತುಂಬಾ ಅರಳ್ಯಾವೇ ಕಿಡಿಗೇಡಿ ಕೆಂದಾವರೆ
ನಾವ್ ಕನಸಲ್ಲಿ ಹೆಂಗಪ್ಪಾ ಆರಾಮಾಗಿರಬೇಕು ಹಗಲಹೊತ್ತೆ ಹಿಂಗ್ ಆದರೆ

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ

ಹಿoಗೆ ಹಿಂದೊಮ್ಮೆ ಎಂದೋ ನಡೆದಂತೆ ಸುತ ಮುತ್ತ ಮರೆತು ಕುಂತೆ
ಹೊಂಗೆ ಮರದಲ್ಲಿ ಹೆಸರು ಕೆತ್ತಿದ್ದು ಮತ್ತೆ ಮತ್ತೆ ನೆನಪಾದಂತೆ
ಮನದ ಗುಡಿಯಲ್ಲಿ ಹಚ್ಚಿಕೊಂಡಿರುವ ಒಂದು ಎರಡು ಮೂರು ಹಣತೆ
ಬಿರುಗಾಳಿ ಮುಂದೆ ಬೊಗಸೆ ಸಾಲಲ್ಲ ಅನ್ನೋದನ್ನೇ ನಾನು ಮರೆತೇ
ಎರಡು ರೇಖೆ ಸಾಲೋದಿಲ್ಲ ಅಂತನಿಸಿ ಎಳಕೊಂಡೆ ಹಣೆಮೇಲೆ ಮೂರ್ನೇ ಗೆರೆ
ಈ ಬದುಕಲ್ಲಿ ಯಾವನೂ ಆರಾಮಾಗಿರಲಾರ ಹಳೆ ನೆನಪೇ ನಿಂತೋದರೆ

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ

ತುಂಬಾ ಅನಿಸುವುದು ನನ್ನಂಥ ನನಗೂ ಪ್ರೀತಿ ಇನ್ನೂ ಗೊತ್ತಾಗಿಲ್ಲ
ಹಂಗಾಗಿ ನಾನು ನನ್ನ ಜೊತೆಗೇನೆ ಜಾಸ್ತಿ ಏನು ಮಾತಾಡಲ್ಲ
ಒಂದು ಸರಿಯಾದ ದುಃಖ ಇರದಿದ್ರೆ ಕಣ್ಣು ಕೂಡ ತುಂಬೋದಿಲ್ಲ
ತುಂಬಾ ಪ್ರೀತಿಸುವೆ ತುಂಟುತನವನ್ನುಗಾಂಭೀರ್ಯವೇ ನಂಗಾಗಲ್ಲ
ಯಾವ್ ಕನಸಲ್ಲೂ ನಾನಂತೂ ಯಾವತ್ತೂ ನೋಡಿಲ್ಲ ಯಾರ್ ಮೇಲೂ ಬಟ್ಟೆ ಬರೇ
ನಾ ಅನಿಸಿದ್ದು ಹೇಳಿರುವೆ ನನ್ನ ಹುಡುಗೀರೆ ಕ್ಷಮಿಸಿ ನೀವೆಲ್ಲ ಸಿಟ್ಟಾದರೆ

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ

Credits
Writer(s): Harikrishna V, Bhatt R
Lyrics powered by www.musixmatch.com

Link