Prathi Mounavu

ಪ್ರತಿ ಮೌನವು ಪರಿಚಯವಾಗಲು ಶುರುವಾಯ್ತು
ನಿನ್ನ ಜುಳು-ಜುಳು ನಗುವಲಿ ಮೀಯುವ ಮನಸಾಯ್ತು

ಬೀಸೋ ಗಾಳಿಯ ಮೆಲ್ಲುಲಿಗಾನ, ಓಡೋ ನದಿಯ ಸಲ್ಲಲಿ ಸ್ನಾನ
ಯಾವ ಸ್ನೇಹವಿದು? ಮೃದುಲಾಸ್ಯ ಮೋಹವಿದು

ಪ್ರತಿ ಮೌನವು ಪರಿಚಯವಾಗಲು ಶುರುವಾಯ್ತು
ನಿನ್ನ ಜುಳು-ಜುಳು ನಗುವಲಿ ಮೀಯುವ ಮನಸಾಯ್ತು

ನೂರು ತರಹ ತಾರೆಗಳ ನೂಲುವಂತ ಆಕಾಶ
ನನ್ನ-ನಿನ್ನ ಕುರಿತು ದಿನ ಹಾಡು ಹೊಸೆಯುತಿದೆ
ಈ ಭೂಮಿಯ ಪಲ್ಲವಿಗಳಲಿ ಪಾತ್ರ ವಹಿಸುತಿದೆ
ಈ ಕಾಲವೇ ನಮ್ಮ ಪ್ರೀತಿಗೊಂದು ಗುರುತು

ಮಳೆಯ ಬಿಲ್ಲಲಿ ಬುಟ್ಟಿ ಹೆಣೆಯುತ, ತಿಂಗಳ ಬೆಳಕ ಭಟ್ಟಿ ಇಳಿಸುತ
ಓದೋ ದಂತಕಥೆ, ಈ ನಮ್ಮ ಸ್ವಂತ ಕಥೆ

ಪ್ರತಿ ಮೌನವು ಪರಿಚಯವಾಗಲು ಶುರುವಾಯ್ತು
ನಿನ್ನ ಜುಳು-ಜುಳು ನಗುವಲಿ ಮೀಯುವ ಮನಸಾಯ್ತು

ನಿನ್ನ ಕಣ್ಣ ಕೊಂಚದಲಿ ಬಣ್ಣ ಬಿಡುವ ಆಸೆಯಲಿ
ಪ್ರತಿ ಕ್ಷಣ ತೊಯ್ದಿಡುವೆ ಚಿತ್ರಪಟವಾಗಿ
ಮರುಕ್ಷಣ ಹೊಯ್ದಿಡುವೆ ಗಾಳಿಪಟವಾಗಿ
ನಮ್ಮಿಬ್ಬರ ಉಸಿರಾಟ ಈಗ ಹೊಸತು

ಉಸಿರ ಏಣಿ, ಹೃದಯ ಛಾವಣಿ, ಎದೆಯ ತಾಳಕೆ ಒಲವೇ ಲಾವಣಿ
ಏನು ಮಾದಕತೆ, ಮನಸೂರೆ ಆದ ಕಥೆ

ಪ್ರತಿ ಮೌನವು ಪರಿಚಯವಾಗಲು ಶುರುವಾಯ್ತು
ನಿನ್ನ ಜುಳು-ಜುಳು ನಗುವಲಿ ಮೀಯುವ ಮನಸಾಯ್ತು



Credits
Writer(s): K Kalyan, V Harikrishna
Lyrics powered by www.musixmatch.com

Link