Pancharangi Putta (From "Gadibidi Ganda")

ಪಂಚರಂಗಿ ಪುಟ್ಟ
ರಾಮನಾದ (ರಾಮನಾದ)
ಪಂಚಪ್ರಾಣ ಕೊಟ್ಟು
ಶಾಮನಾದ (ಶಾಮನಾದ)
ಒಲವಿನ ಮಳೆಯಲಿ
ನೆನೆದಿರೋ ಮನದಲಿ
ಹರೆಯದ ಸಸಿಯಲಿ ಚಿಗುರೊಡೆದ

ಪಂಚರಂಗಿ ಪುಟ್ಟ
ರಾಮನಾದ (ರಾಮನಾದ)
ಪಂಚಪ್ರಾಣ ಕೊಟ್ಟು
ಶಾಮನಾದ (ಶಾಮನಾದ)
ಒಲವಿನ ಮಳೆಯಲಿ
ನೆನೆದಿರೋ ಮನದಲಿ
ಹರೆಯದ ಸಸಿಯಲಿ ಚಿಗುರೊಡೆದ (ಚಿಗುರೊಡೆದ, ಚಿಗುರೊಡೆದ)

ಮದನ ಬೀದಿ ಮದನ
ಸೆಳೆದಾ ರತಿಯ ಗಮನ
ಗಮಕ ಕಲಿಯೋ ನೆಪದೀ ಬಂದು
ಗುಮಕ ಕಲಿತು ಹೊಡೆದಾ
ಬಸವ ಬೀದಿ ಬಸವಾ
ತೆರೆದ ಮನದ ಹಸಿವ
ನೊಗವ ಎಳೆಯೋ ನೆಪದೀ ಬಂದು
ಮನಸ ಎಳೆದು ಕರೆದ
ಪುಟ್ಟ ಪುಟ್ಟ ಪೋಲಿ ಪುಟ್ಟ
ಸಂಗೀತ ಸ್ವರ ಕಲಿತ
ಹಾಡಲ್ಲಿಯೇ ಹೆಣ್ಣಾಡಿಸೋ...
ವಿದ್ಯೆಲೀ ಉಂಡು ಬಲಿತ
ಕಿಟ್ಟ ಕಿಟ್ಟಾ ಪುಂಡ ಕಿಟ್ಟಾ
ಪೋಲಿ ಕಟ್ಟೆಯಾ ಮರೆತ
ಮಾತಾಡದೆ ಮುದ್ದಾಡುವ
ಗೋವಿಂದಾ ಕಲೆ ಕಲಿತ

ಪಂಚರಂಗಿ ಪುಟ್ಟ
ರಾಮನಾದ (ರಾಮನಾದ, ರಾಮನಾದ, ರಾಮನಾದ)
ಪಂಚಪ್ರಾಣ ಕೊಟ್ಟು
ಶಾಮನಾದ (ಶಾಮನಾದ, ಶಾಮನಾದ, ಶಾಮನಾದ)
ಒಲವಿನ ಮಳೆಯಲಿ
ನೆನೆದಿರೋ ಮನದಲಿ
ಹರೆಯದ ಸಸಿಯಲಿ ಚಿಗುರೊಡೆದ

ರತುನ ಬಂತು ರತುನ
ಅಂದ್ರೆ ಬಂತು ಲಗ್ನ
ಕನ್ನ ಹೊಡೆಯೋ ಮುನ್ನ
ನನ್ನ ಮನೆಗೆ ಬಂತು ಚಿನ್ನಾ
ಗಿಡುಗ ಬಂತು ಗಿಡುಗಾ
ಅಂದ್ರೆ ಬಂದ ಹುಡುಗಾ
ಹುಡುಗ ಗುಡುಗೋ ಮೊದಲೇ
ತುಟಿಗೆ ತೊಡಿಸೇ ಬಿಟ್ಟೆ ಕಡಗ
ಆಗೊಂಬೆಯ ಕಾಡಲ್ಲಿನ
ದಾಳಿಂಬೆ ಕೀಳ ಹೋದರೆ
ದಾಳಿಂಬೆಯ ರೆಂಬೆಯಲ್ಲಿ
ಹೆಜ್ಜೇನು ಕೂಗಿ ಕೊಟ್ಟಿತ್ತು
ಆಕಾಶದ ನಕ್ಷತ್ರದ
ಸಂಸಾರ ನೋಡುತ್ತಿದ್ದರೆ
ಮೈ ಗೂಡಲಿ ಶ್ರೀ ಚಂದ್ರನು
ಸಂಚಾರ ಮಾಡುತ್ತಿದ್ದನು

ಪಂಚರಂಗಿ ಪುಟ್ಟ
ರಾಮನಾದ (ರಾಮನಾದ, ರಾಮನಾದ, ರಾಮನಾದ)
ಪಂಚಪ್ರಾಣ ಕೊಟ್ಟು
ಶಾಮನಾದ (ಶಾಮನಾದ, ಶಾಮನಾದ, ಶಾಮನಾದ)
ಒಲವಿನ ಮಳೆಯಲಿ
ನೆನೆದಿರೋ ಮನದಲಿ
ಹರೆಯದ ಸಸಿಯಲಿ ಚಿಗುರೊಡೆದ

ಪಂಚರಂಗಿ ಪುಟ್ಟ
ರಾಮನಾದ (ರಾಮನಾದ, ರಾಮನಾದ, ರಾಮನಾದ)
ಪಂಚಪ್ರಾಣ ಕೊಟ್ಟು
ಶಾಮನಾದ (ಶಾಮನಾದ, ಶಾಮನಾದ, ಶಾಮನಾದ)
ಒಲವಿನ ಮಳೆಯಲಿ
ನೆನೆದಿರೋ ಮನದಲಿ
ಹರೆಯದ ಸಸಿಯಲಿ ಚಿಗುರೊಡೆದ



Credits
Writer(s): Hamsalekha
Lyrics powered by www.musixmatch.com

Link