Bareve Bareve Olava Kavana

ಬರೆವೆ ಬರೆವೆ ಒಲವ ಕವನ
ಮರೆತು ನಡೆವೆ ಒಂಟಿ ಪಯಣ

ನನ್ನೊಲವೇ ಕೂಡಿಡಲೇ ನಾ ನಿನ್ನ
ಕಣ ಕಣವು ನನ್ನೊಡಲ ಗೂಡೊಳಗೆ
ನನ್ನುಸಿರೆ ಪೂಜಿಸಲೇ ನಾ ನಿನ್ನ
ಕ್ಷಣ ಕ್ಷಣವೂ ನನ್ನೆದೆಯ ಗುಡಿಯೊಳಗೆ

ಜೊತೆಗಿರುವೆ ನಾ ನಿನ್ನ ನೆರಳಂತೆ ಬಾ ಸನಿಹ ಸನಿಹ
ನನ್ನೀ ಬಾಳ ಪುಟಕೇ ನೀ ಹೊಸದಾದ ಬರಹ

ನೀ ಬಂದ ಕ್ಷಣವೇ, ಮರೆತೆ ಜಗದ ಪರಿವೆ
ಸಂಗಾತಿ ನೀ ಬೆಳಕಾಗು ಬಾ ಮನದ ಮನೆಗೆ
ರಾಗ ನೀ ಶ್ರುತಿ ಲಯವೂ ನೀ ಬಾಳ ಸ್ವರಕೆ
ಕೊನೆಯ ಉಸಿರವರೆಗೂ ಕೊಡುವೆ ಖುಷಿಯ ಹೊದಿಕೆ
ಪ್ರತಿ ಜನುಮದಲ್ಲೂ ಜೊತೆಗಿರುವ ಬಯಕೆ

ನನ್ನೊಲವೇ ಕೂಡಿಡಲೇ ನಾ ನಿನ್ನ
ಕಣ ಕಣವು ನನ್ನೊಡಲ ಗೂಡೊಳಗೆ
ನನ್ನುಸಿರೆ ಪೂಜಿಸಲೇ ನಾ ನಿನ್ನ
ಕ್ಷಣ ಕ್ಷಣವೂ ನನ್ನೆದೆಯ ಗುಡಿಯೊಳಗೆ



Credits
Writer(s): B. Ajaneesh Loknath, Srinivas Chikkanna(seeni)
Lyrics powered by www.musixmatch.com

Link