Komuram Bheemudho

ಭೀಮಾ
ನಿನ್ನ ಹೆತ್ತ ಧರಣಿ ತಾಯಿ
ಉಸಿರು ಬಸಿದಂಥ ಗಿಡ ಮರ
ಮನೆಮಗನೆಂದ ಗೊಂಡು ಜಾತಿ ನಿನ್ ಜೊತೆ ಮಾತಾಡ್ತಿದ್ಯೋ
ಕೇಳಿಸ್ತಾಯಿದ್ಯಾ?

ಕೋಮುರಂ ಭೀಮ್ ಉಧೋ ಕೋಮುರಂ ಭೀಮ್ ಉಧೋ
ಉರಿವ ಸೂರ್ಯನ ಹಾಂಗೆ ಮೈ ನೊಗವ ಉರಿಸೋ
ಮೈ ನೊಗವ ಉರಿಸೋ

ಕೋಮುರಂ ಭೀಮ್ ಉಧೋ ಕೋಮುರಂ ಭೀಮ್ ಉಧೋ
ನರನಾಡಿ ಕುದಿವಾಂಗೆ ಧಗಧಗನೆ ಉರಿಸೋ
ಧಗಧಗನೆ ಉರಿಸೋ

(Make that bastard kneel now)

ಕೈ ಮುಗಿದು ಬಿಳಿ ದೊರೆಯ ಕಾಲಿಗೆ ನೀ ಬಿದ್ರೆ
ಕಾರಡವಿಯ ತಾಯಿಗೆ ನೀ ಮಗನಲ್ಲ ಕೇಳೋ
ಮಗನಲ್ಲ ಕೇಳೋ
ಜುಲುಮೆ ದರ್ಪವ ನೀನು ಸಹಿಸಿ ಶರಣೆಂದ್ರೆ
ಭೂತಾಯ ಮಡಿಲಲ್ಲಿ ಬೆಳೆದಿಲ್ಲ ಕೇಳೋ
ಬೆಳೆದಿಲ್ಲ ಕೇಳೋ

ಕೋಮುರಂ ಭೀಮ್ ಉಧೋ ಕೋಮುರಂ ಭೀಮ್ ಉಧೋ
ಉರಿವ ಸೂರ್ಯನ ಹಾಂಗೆ ಮೈ ನೊಗವ ಉರಿಸೋ
ಮೈ ನೊಗವ ಉರಿಸೋ

ಚರ್ಮ ಸುಲಿವ ಪೆಟ್ಟಿಗೆ ಅಮ್ಮಾ ಅಂತಂದ್ರೆ
ಸುರಿವ ನೆತ್ತರ ಕಂಡು ನೀ ಹೆದರಿಕೊಂಡ್ರೆ
ಬೆದರುತ್ತ ಕಣ್ಣೀರ ನೀ ಸುರಿಸಿದೆಯಂದ್ರೆ
ಭೂತಾಯಿ ಎದೆಹಾಲು ಕುಡಿದಿಲ್ಲ ಕೇಳೋ
ಕುಡಿದಿಲ್ಲ ಕೇಳೋ

ಕೋಮುರಂ ಭೀಮ್ ಉಧೋ ಕೋಮುರಂ ಭೀಮ್ ಉಧೋ
ಉರಿವ ಸೂರ್ಯನ ಹಾಂಗೆ ಮೈ ನೊಗವ ಉರಿಸೋ
ಮೈ ನೊಗವ ಉರಿಸೋ

ಕಾಲುವೆಯ ಬರಿಸಿರೋ ನಿನ ಗುಂಡಿಗೆ ನೆತ್ತರು
ಕಾಲುವೆಯ ಬರಿಸಿರೋ ನಿನ ಗುಂಡಿಗೆ ನೆತ್ತರು
ನೆಲದಮ್ಮನ ಹಣೆಯ ಬೊಟ್ಟಾಗ್ತೈತೆ ನೋಡು
ಅಮ್ಮನ ಕಾಲಿನ ಮದರಂಗಿ ಆಗ್ತದೆ ನೋಡು
ತಾಯ ಮೊಗದಲಿ ನಗುವ ಮೆರಿಸುತ್ತೆ ನೋಡು

ಕೋಮುರಂ ಭೀಮ್ ಉಧೋ
ಕೋಮುರಂ ಭೀಮ್ ಉಧೋ
ಭೂಮಿ ತಾಯಿಗೆ ಜನುಮ ಉಡುಗೊರೆ ನೀಡಿದೆಯೋ
ಕೋಮುರಂ ಭೀಮ್ ಉಧೋ



Credits
Writer(s): M. M. Keeravani, Suddala Ashok Teja
Lyrics powered by www.musixmatch.com

Link