Lullaby Song Rajkumari (From "Vikrant Rona")

ತಣ್ಣನೆ ಬೀಸೋ ಗಾಳಿ
ಹಾಡಿದೆ ಜೋಜೋ ಲಾಲಿ

ತಣ್ಣನೆ ಬೀಸೋ ಗಾಳಿ
ಹಾಡಿದೆ ಜೋಜೋ ಲಾಲಿ
ಈ ನನ್ನ ಮಡಿಲೇ ನಿನ್ನ ತೂಗೋ ಉಯ್ಯಾಲೆ
ತೂಗೋ ಉಯ್ಯಾಲೆ

ಚಂದ ಮಾಮ ಬಾನಾ ಏರಿ ಕದ್ದು ಮಲಗಿದ
ನಿದ್ದೆಗಣ್ಣಿನಲ್ಲೇ ಇಡೀ ಭೂಮಿ ಬೆಳಗಿದ
ಚಂದ್ರನ ಬೆಳಕಿನಲ್ಲಿ ಮಲಗು ರಾಜಕುಮಾರಿ
ಕನಸಿನ ತೇರಾ ಏರಿ ಮಾಡು ಸವಾರಿ
ನೀ ಮಾಡು ಸವಾರಿ

ಗುಮ್ಮ ಬರುತಾನೆಂದೇಕೆ ಅಳುವೆ
ನಿನ್ನ ಬಳಿಯೇ ನಾನಿರುವೆ ಕಂದ
ಓಡಿ ಬಂದು ನಿನ್ನ ಅಪ್ಪಿಕೊಳ್ಳುವೆ
ಹೋಗದಿರು ನೀ ದೂರ ನನ್ನಿಂದ
ಇರುಳನು ಬೆಳಗೋ ನಗು
ಎಂದೂ ಹೀಗೆ ಇರಲಿ ಮಗು
ನನ್ನ ಜೀವ ನಿನ್ನ ಒಳಗಿದೆ
ಮೇಘರಾಜ ಕೂಡ ನೀರಾಗಿ ಕರಗಿದ
ಬಾಚಿ ತಬ್ಬಿಕೊಂಡು ಹಸಿರಾಯ್ತು ಮರಗಿಡ
ಎಲೆಯ ಬೊಗಸೆಯಿಂದ
ಭೂಮಿಯ ಮೇಲೆ ಜಾರಿ
ಮಳೆ ಹನಿ ಮಾಡೋ ಸದ್ದೆ ಸುವ್ವಿ ಸುವ್ವಾಲಿ
ಸುವ್ವಿ ಸುವಾಲಿ

ನನ್ನ ಬಾಳಿನಲ್ಲಿ ನೀನು ಇರುವೆ
ಕಣ್ಣ ಹನಿಯ ಒರೆಸೋ ಬೆರಳಾಗಿ
ಎಂದೂ ನಿನ್ನ ಹಿಂದೆ ಹಿಂದೆ ಬರುವೆ
ಎಲ್ಲೇ ಹೋದರೂ ನಿನ್ನ ನೆರಳಾಗಿ
ಪ್ರೀತಿಯಿಂದ ಗುದ್ದಾಡುವೆ
ಅಪ್ಪಿಕೊಂಡು ಮುದ್ದಾಡುವೆ
ತುಂಟಿ ಹೇಗೋ ನನ್ನ ನಗಿಸುವೆ
ಸದ್ದು ಮಾಡ ಬೇಡ ಓ ಬೀಸೋ ಗಾಳಿಯೇ
ಕಂದನಿಗೆ ಸಾಕು ಈ ನನ್ನ ಲಾಲಿಯೇ
ಕಣ್ಣಿನ ರೆಪ್ಪೆ ಮುಚ್ಚಿ ನಿದ್ದೆಗೆ ಬೇಗ ಜಾರಿ
ಮಲಗೆ ಮಲಗೆ ನನ್ನ ಮುದ್ದು ಬಂಗಾರಿ
ಮುದ್ದು ಬಂಗಾರಿ



Credits
Writer(s): B. Ajaneesh Loknath
Lyrics powered by www.musixmatch.com

Link