Khaali Akaasha

ಖಾಲಿ ಆಕಾಶ ನನ್ನೇ ನೋಡಿದೆ
ನೀಲಿ ನನ್ನನ್ನೇ ನುಂಗೋ ಹಾಗಿದೆ
ಗೋಡೆಯ ಮೇಲಿನ ಚಿತ್ತಾರವೆಲ್ಲವೂ
ನಗುತಲಿವೆ ಅಣಕಿಸಿವೆ
ನೀನೇ ಇಲ್ಲದೆ
ನಂಗೆ ಏನಿದೆ?

ಖಾಲಿ ಆಕಾಶ ನನ್ನೇ ನೋಡಿದೆ
ನೀಲಿ ನನ್ನನ್ನೇ ನುಂಗೋ ಹಾಗಿದೆ

ನಿಜ, ಭ್ರಮೆ, ಬರೀ ಗೊಂದಲ ಜಗತ್ತೇ ಹುಸಿ
ಅರೆ, ಬರೆ ಕೊನೆಯಾಯಿತೇ ನನ್ನೆಲ್ಲ ಖುಷಿ
ಕೈಗೆ ಸಿಗೋ ಮುನ್ನವೇ ಮರೆಯಾದೆಯಾ, ಓ ಮಾಯಾವಿಯೇ
ನೋಡೀಗ ನಿನ್ನದೇ, ನೆನಪಿನ ನೂರಾರು ಚೂರಿಯು
ಇರಿಯುತಿದೆ, ಎಡಬಿಡದೆ
ನೀನೇ ಇಲ್ಲದೆ ನಂಗೆ ಏನಿದೆ?
ನೀನೇ ಇಲ್ಲದೇ

ಖಾಲಿ ಆಕಾಶ ನನ್ನೇ ನೋಡಿದೆ



Credits
Writer(s): Kaviraj, Arjun Janya
Lyrics powered by www.musixmatch.com

Link