Maadappa

ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
ಕುಟ್ಟು ಭತ್ತವ ತಟ್ಟು ರೊಟ್ಟಿಯ ಕೇಳು ಎಲ್ಲೆಲ್ಲೂ ಪದವೈತೆ
ಕಟ್ಟು ಗಾಡಿಯ ಸುತ್ತು ರಾಟೆಯ ಎಲ್ಲೆಲ್ಲೂ ಕೇಳು ಪದವೈತೆ
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ

ಓರಿಕೊರಳಿನ ಗಂಟೆ ಶಬ್ದವು ಗೋಧೂಳಿ ಸಂಜೆಗೆ ಪದ
ಹಸುಗೂಸಿನ ಗೆಜ್ಜೆ ಸಪ್ಪಳ ಹಡೆದವ್ಗೆ ನಿತ್ಯದಾ ಪದ
ಹೊತ್ಮೂಡ್ತು ಅನ್ನೊ ಕೋಳಿ ಕೂಗು ಹಳ್ಳಿಯ ಕಾಯ ಪದವು
ಅಂಬಾ ಹಸಿವಾತು ಅನ್ನೊ ಕರುವ ಕೂಗಲಿ ಬೆಳಕ ಪದವು
ರುಚಿಯದು ಅನ್ನದ ಪದವೋ
ಅನ್ನವು ಬೆವರಿನ ಪದವೋ
ಬೆವರದು ದುಡಿಮೆಯ ಪದವೋ
ದುಡಿಮೆಯು ಭಕುತಿ ಪದವೋ
ಭೂತಾಯಿ ಜೋಗುಳ ಜಗಕ್ಕೆ ಸರಿಗಮಪ
ಮಗುವಂತ ಮನಸ್ಸಲ್ಲಿ ಎಂದೆಂದೂ ಸನಿದಪಮ

ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ

ಗೋಡೆಯ ಕೆಡವಿ ಸೇತುವೆ ಕಟ್ಟುವ ಪದವೊಂದ
ಮಾದಪ್ಪನೆ ಎಸೆಯೋ ಭೂಮಿಗೆ ಬೆಳಗಲಿ ಸಂಬಂಧ
ನೋವಿರುವ ನಲಿವಿರುವ ಬದುಕೊಂದು ಪದದಸಂತೆ
ದಣಿದಿರುವ ಮನಗಳಿಗೆ ಪದವೊಂದು ಹೆಗಲಿನಂತೆ
ನಿಂತಲ್ಲೇ ನಿಲದಿರು ಜೀವ
ಹರಿದಾಡು ಪದದಂತೆ ಪದವಾಗ್ಲಿ ಬದುಕು
ಹೂವೊಂದು ಬೇರಿನ ಪದವೋ
ಹಣ್ಣೊಂದು ಮಣ್ಣಿನ ಪದವೋ
ನಗುವದು ಒಲವಿನ ಪದವೋ
ಒಲವದು ಬದುಕಿನ ಪದವೋ

ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ

ಉಘೇ ಮಾತ್ಮಲ್ಲ್ಯಾ



Credits
Writer(s): Raghu Dixit, Dhananjaya
Lyrics powered by www.musixmatch.com

Link