Na Yenu Nambodilla

ನಾನೇನು ನಂಬೋದಿಲ್ಲ ಪ್ರೀತಿ ಗೀತೀಯ.
ಸರಿ ಇನ್ನೊಮ್ಮೆ ಕೇಳು ನನ್ನ ಪ್ರೇಮ ಗೀತೆಯ.

ನಾನೇನು ನಂಬೋದಿಲ್ಲ ಪ್ರೀತಿ ಗೀತೀಯ.
ಸರಿ ಇನ್ನೊಮ್ಮೆ ಕೇಳು ನನ್ನ ಪ್ರೇಮ ಗೀತೆಯ.

ತಾನಾಗಿಯೇ ಮನ ಹಾರಾಡಿದೆ, ನೀ ಕೇಳು ಒಲವಿನ ಇಂಚರ.
ಪ್ರೀತಿಯಲ್ಲಿ ಸೋತು ನೋಡು, ಪ್ರೀತಿಯಲ್ಲಿ ಮಾತೇ ಹಾಡು,
ಪ್ರೀತಿಯಲ್ಲಿ ಜಗವೆಲ್ಲ ಜಗ ಮಗ ಸುಂದರ.

ಪ್ರೀತಿ ಇದು ಸುಳ್ಳೇ ಶೋಕಿ, ಪ್ರೀತಿಯಲ್ಲಿ ನೋವೇ ಬಾಕಿ,
ಪ್ರೀತಿ ಇದು ಹಿತವಾಗಿ ಸೆಳೆಯುವ ಪಂಜರ.

ಪಿಸು ನೋಟದಿಂದಲೇ ಓಲೆ ಬರೆವ, ಅಲೆಮಾರಿ ಸಂತೋಷ ಈ ಪ್ರೀತಿಗೆ.
ಮರುಳಾಗಿ ಹಿಂದೇನೆ ಓಡಿ ಬರುವ, ಹಟಮಾರಿ ಆವೇಶ ಈ ಪ್ರೀತಿಗೆ.
ಈ ಕಾಯುವ ಖುಷಿ ಬೇರೆ ಇದೆ, ಮನಸ್ಸೀಗ ಕನ್ನಸ್ಸಿನ ಆಗರ.
ಹೇ ಪ್ರೀತಿ ಬರೀ ಆಪಾದನೆ (ಹ್ಹ), ಗಾಯಗಳ ಸಂಪಾದನೆ. (ಹ್ಹ)
ಪ್ರೀತಿ ಇದು ನೂರೆಂಟು ಸುಳಿಗಳ ಸಾಗರ.

ನಾನೇನು ನಂಬೋದಿಲ್ಲ ಪ್ರೀತಿ ಗೀತೀಯ.
ಸರಿ ಇನ್ನೊಮ್ಮೆ ಕೇಳು ನನ್ನ ಪ್ರೇಮ ಗೀತೆಯ.

ನಾನೇನು ನಂಬೋದಿಲ್ಲ ಪ್ರೀತಿ ಗೀತೀಯ.
ಸರಿ ಇನ್ನೊಮ್ಮೆ ಕೇಳು ನನ್ನ ಪ್ರೇಮ ಗೀತೆಯ.

ಗರಿನಿಸಸಾಸ ಗರಿನಿಸಸಾಸ ಗರಿಮರಿಸನೀ.
ಗರಿನಿಸಸಾಸ ಗರಿನಿಸಸಾಸ ರಿಗಮರಿನಿಪಮ.
ಗರಿನಿಸಸಾಸ ಗರಿನಿಸಸಾಸ ಗರಿಮರಿಸನೀ.
ಪನಿಸನಿಸಾಸ ನಿಸರಿಸರೀರೀ ಗರೀನಿದಪ.

ನೋವನ್ನು ನಲಿವನ್ನು ಲೆಕ್ಕ ಇಡುವ ಬೇಕಾರು ತಕರಾರು ಈ ಪ್ರೇಮವೂ.
ಎಕಾಂತದಲ್ಲೂನೂ ಪಕ್ಕ ಇರುವ ನೆನಪೀನ ತವರೂರು ಈ ಪ್ರೇಮವೂ.
ಇದ್ದಂತೆಯೇ ಮನ ಹಾಯಾಗಿದೆ, ಬೇಕೇನೂ ವಿರಹದ ಬೇಸರ.
ಪ್ರೀತಿಯಲ್ಲಿ ಎಲ್ಲಾ ಮಾಫು, ಪ್ರೀತಿಯಲ್ಲಿ ಹೃದಯ ಸಾಫು.
ಪ್ರೀತಿಸುವ ಕಣ್ಣಲ್ಲಿ ನಗುವನು ಚಂದಿರ.
ನಾನೇನು ನಂಬೋದಿಲ್ಲ ಪ್ರೀತಿ ಗೀತೀಯ.
ಸರಿ ಇನ್ನೊಮ್ಮೆ ಕೇಳು ನನ್ನ ಪ್ರೇಮ ಗೀತೆಯ.
ನಾನೇನು ನಂಬೋದಿಲ್ಲ ಪ್ರೀತಿ ಗೀತೀಯ.
ಸರಿ ಇನ್ನೊಮ್ಮೆ ಕೇಳು ನನ್ನ ಪ್ರೇಮ ಗೀತೆಯ.



Credits
Writer(s): Mano Murthy, Jayant Kaikini
Lyrics powered by www.musixmatch.com

Link