Bisilu Kudure

ಹೊ... ಬಿಸಿಲು ಕುದುರೆಯೊಂದು
ಎದೆಯಿಂದ ಓಡಿದಂತೆ.
ಅವಳ ನೆನಪಿನಿಂದ
ನದಿಯೊಂದು ಮೂಡಿದಂತೆ.

ಕಣ್ಣು ಕಂಬನಿಯಾ
ಮುಚ್ಚಿಡಲು ಹೆದರುವುದು.
ನೆನ್ನೆ ಮೊನ್ನೆಗಳಾ
ಎತ್ತಿಡಲಿ ಅನಿಸುವುದು.

ಕೆಳಗೆ ಬಂದು ಮರಳಿಹೋದ
ಹಾಳಾದ ಚಂದಿರಾ.
ಅವಳು ಹೋದಮೇಲೆ ಬಂದ ನೋವೊಂದೆ
ಸುಂದರಾ.

ಬರೆದುಕೊಂಡೆ ಹಣೆಯಾ
ರಂಗೋಲಿ.
ಇನ್ನುಮುಂದೆ ವಿರಹ
ಮಾಮೂಲಿ.!

ನನ್ನ ನೆರಳಿಗೂ
ದಾರಿ ಮರೆಯುತಿದೇ.
ಕುರುಡು ಕನಸಿಗೆ
ನೆನಪೇ ದೀವಟಿಗೆ.

ಹೃದಯದ ತೋಟದೊಳಗಡೆ
ಎಂದು ಅರಳದ
ಹೂವಿನ ಬೆಳವಣಿಗೆ.

ಎಲ್ಲಿಗೋ ಹೊರಟು ಹೋಗಿದೆ
ನಂಗು ತಿಳಿಯದೆ
ನಲ್ಮೆಯ ಮುಗುಳುನಗೆ.

ಹೃದಯದ ತೋಟದೊಳಗಡೆ
ಎಂದು ಅರಳದ
ಹೂವಿನ ಬೆಳವಣಿಗೆ.

ಎಲ್ಲಿಗೋ ಹೊರಟು ಹೋಗಿದೆ
ನಂಗು ತಿಳಿಯದೆ
ನಲ್ಮೆಯ ಮುಗುಳುನಗೆ.

ಬಿಸಿಲು ಕುದುರೆಯೊಂದು
ಎದೆಯಿಂದ ಓಡಿದಂತೆ.
ಅವಳ ನೆನಪಿನಿಂದ
ನದಿಯೊಂದು ಮೂಡಿದಂತೆ.
ಕಣ್ಣಿನ ಕಡಲಲಿ

ಮುಳುಗಡೆಯಾಗಿದೆ
ನಾನೆ ಬಿಟ್ಟಾ ದೋಣಿ.
ನೆನ್ನಯ ಪ್ರಶ್ನೆಗೆ

ಉತ್ತರ ಎಲ್ಲಿದೆ
ಅವಳೋ ತುಂಬಾ ಮೌನಿ.
ಮೊದಲಿನಿಂದ ಮೊಹಿಸುವೇನು

ಮರಳಿ ಬಂದರೆ ಅವಳು.
ನನಗೂ ಗೊತ್ತು, ಅವಳು ಬರಳು
ನನ್ನ ಸ್ವಪ್ನದಲು...!
ಹೃದಯದ ತೋಟದೊಳಗಡೆ
ಎಂದು ಅರಳದ

ಹೂವಿನ ಬೆಳವಣಿಗೆ.
ಎಲ್ಲಿಗೋ ಹೊರಟು ಹೋಗಿದೆ
ನಂಗು ತಿಳಿಯದೆ
ನಲ್ಮೆಯ ಮುಗುಳುನಗೆ.
ಹೃದಯದ ತೋಟದೊಳಗಡೆ
ಎಂದು ಅರಳದ
ಹೂವಿನ ಬೆಳವಣಿಗೆ.
ಎಲ್ಲಿಗೋ ಹೊರಟು ಹೋಗಿದೆ
ನಂಗು ತಿಳಿಯದೆ
ನಲ್ಮೆಯ ಮುಗುಳುನಗೆ.
ಬಿಸಿಲು ಕುದುರೆಯೊಂದು
ಎದೆಯಿಂದ ಓಡಿದಂತೆ.
ಅವಳ ನೆನಪಿನಿಂದ
ನದಿಯೊಂದು ಮೂಡಿದಂತೆ.



Credits
Writer(s): Yogaraj Bhat, Sridhar Saravanan
Lyrics powered by www.musixmatch.com

Link