Savira Hoogalu

ಸಾವಿರ ಹೂಗಳು ಅರಳಲಿ
ನೀ ಬರಲು ನನ್ನ ಎದುರಲಿ
ಸಾವಿರ ಬಾಗಿಲು ತೆರೆಯಲಿ
ನನಗಾಗಿ ನಿನ್ನ ಎದೆಯಲಿ
ಉಸಿರೇ, ನೀನೆ ನನ್ನ ಉಸಿರಲಿ
ಸಾವಿರ ಹೂಗಳು ಅರಳಲಿ
ನೀ ಬರಲು ನನ್ನ ಎದುರಲಿ
ಸಾವಿರ ಬಾಗಿಲು ತೆರೆಯಲಿ
ಹೊಂಬಿಸಿಲು ಹುಣ್ಣಿಮೆಯು
ಒಂದೇ ಸಾರಿ ಬಂದಂತೆ
ನೀ ಬಂದೆ ಈ ನನ್ನ ಜೀವದೊಳಗೆ
ನಿನ್ನ ಬಿಟ್ಟು ನಾನಿಲ್ಲ ಒಂದು ಗಳಿಗೆ
ಮೇಘಗಳ ಹಾಳೆಯಲಿ ಓಲೆ ಗೀಚಿ ತೇಲಿಸಿದೆ
ನೋಡು ನೋಡು ಸಾಲಾಗಿ ಬಾನು ಬುವಿಗೆ
ಕದ್ದು ನಾವು ಓದೋಣ ಜೊತೆ ಜೊತೆಗೆ
ಉಸಿರೇ, ನೀನೆ ನನ್ನ ಉಸಿರಲಿ
ಸಾವಿರ ಹೂಗಳು ಅರಳಲಿ
ನೀ ಬರಲು ನನ್ನ ಎದುರಲಿ
ಸಾವಿರ ಬಾಗಿಲು ತೆರೆಯಲಿ
ಯಾರಿರದ ಸೂರಿರದ ಒಂಟಿ ಒಂಟಿ ಜೀವದಲಿ
ನೀನು ಬಂದ ಮೇಲೆಲ್ಲ ಎಲ್ಲ ಸೊಗಸು
ಕಟ್ಟಿ ಕೊಟ್ಟೆ ನಂಗೂನು ಕೋಟಿ ಕನಸು
ಹೇಳುವುದು ಕೇಳುವುದು
ಇನ್ನು ಏನೂ ಉಳಿದಿಲ್ಲ
ನಿಂಗೆ ಬಿಟ್ಟು ಕೊಟ್ಟಾಯ್ತು ನನ್ನ ಮನಸ
ನಿನ್ನ ಪ್ರೀತಿ ಮಾಡೋದೆ ನನ್ನ ಕೆಲಸ
ಉಸಿರೇ, ನೀನೆ ನನ್ನ ಉಸಿರಲಿ
ಸಾವಿರ ಹೂಗಳು ಅರಳಲಿ
ನೀ ಬರಲು ನನ್ನ ಎದುರಲಿ
ಸಾವಿರ ಬಾಗಿಲು ತೆರೆಯಲಿ
ನನಗಾಗಿ ನಿನ್ನ ಎದೆಯಲಿ
ಉಸಿರೇ, ನೀನೆ ನನ್ನ ಉಸಿರಲಿ



Credits
Writer(s): Kaviraj, S. Narayan
Lyrics powered by www.musixmatch.com

Link