Gatiya Ilidu

ಘಟ್ಟದ ಅಂಚಿದಾಯೆ
ತೆಂಕಾಯಿ ಬತ್ತು ತೂಯೆ
ಅಲೆನ ತೆಲ್ಕೇದ ಪೊರ್ಲೀಗೆ ತಾದಿನಾಡಿಯೇ (ತಾದಿನಾಡಿಯೇ, ತಾದಿನಾಡಿಯೇ)

(ಘಾಟೀಯ ಇಳಿದು, ತೆಂಕಣ ಬಂದು
ಅವಳಾ ನೋಡಿ ನಿಂತನು
ಕಡಲ ಬೀಸೋ ಗಾಳಿಗವಳು ಮಾತನಾಡಲು
ಕೇಳದ ಪಿಸುಮಾತಿಗಿವನು ಮರುಳನಾದನು)

ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ
ಅಯ್ಯಯ್ಯಯ್ಯೋ, ನಗ್ತವ್ಳಾ?
ಅಯ್ಯಯ್ಯಯ್ಯೋ, ನಗ್ತವ್ಳಾ?

ಮನದ ಹಿಂದಾರಿಲಿ ಬರದೇ ಕವಲು
ಆ ಕವಲು ದಾರಿಗೆ ಕಾವಲಾ?
ಮರುಭೂಮಿಯಲಿ ಹೆಜ್ಜೆಯ ಗುರುತು
ಆ ಗುರುತೇ ನಿನ್ನಯ ನೆರಳಾ?
ಮನಸಾ ಬಿಚ್ಚಿಟ್ಟವನ
ಬರಯಲು ಮೌನದ ಕವನ
ಪದಗಳೇ ಇಲ್ಲದ ಸಾಲ
ಇಳಿಸಲು ಹಾಳೆಯ ಮೇಳ
ಸೇರಲು ರಂಗು ಮಾಸಿತು ಶಾಹಿಯ ಗೀಚಲು

ಸಮಯ, ಸಾಗುವ ಗತಿಯ, ತಡೆಯುವ ಪರಿಯ ನಾ ಕಾಣೆನು
ಕಳೆವ ಸನಿಹದ ಕ್ಷಣವ, ಮೌನದ ಸ್ವರವ ಕೂಡಿಡುವೆನು

(ಶ್ರಾವಣ ಕಳೆದು, ಮರಳನು ಅಳೆದು, ದೂರವ ಸವಿದು ಕೂತನು
ಕಡಲ ಬೀಸೋ ಗಾಳಿಗವಳು ಮಾತನಾಡಲು
ಕೇಳದ ಪಿಸಿ ಮಾತಿಗಿವನು ಮರುಳನಾದನು)

ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ
ಅಯ್ಯಯ್ಯಯ್ಯೋ, ನಗ್ತವ್ಳಾ?
ಅಯ್ಯಯ್ಯಯ್ಯೋ, ನಗ್ತವ್ಳಾ?

ಘಟ್ಟದ ಅಂಚಿದಾಯೆ
ತೆಂಕಾಯಿ ಬತ್ತು ತೂಯೆ
ಅಲೆನ ತೆಲ್ಕೇದ ಪೊರ್ಲೀಗೆ ತಾದಿನಾಡಿಯೇ



Credits
Writer(s): Chandan Shetty, 8d Sound By Ismart Beatz
Lyrics powered by www.musixmatch.com

Link