Kelade Nimageega

ಕೇಳದೇ ನಿಮಗೀಗ ದೂರದಲ್ಲಿ ಯಾರೋ
ಹಾಡು ಹೇಳಿದಂತೇ
ಒಂದು ಹೆಣ್ಣಿನ
ಓ... ನೊಂದ ವಿರಹ ಗೀತೆ
ಕೇಳದೇ ನಿಮಗೀಗ ದೂರದಲ್ಲಿ ಯಾರೋ

ಸಂಪಿಗೆ ಒಂದೂರು, ಮಲ್ಲಿಗೆ ಒಂದೂರು
ನಡುವಲ್ಲಿ ನದಿಯೊಂದು
ಹಗ್ಗದ ಉಯ್ಯಾಲೆ, ತೂಗುವ ಹಾಗೊಂದು
ಸೇತುವೆಯು ಅಲ್ಲೊಂದು
ಈ ಊರ ಚೆಲುವೆ, ಆ ಊರ ಚೆಲುವ
ನದಿಯಂಚಲಿ ಓಡಾಡುತಾ ಎದುರಾದರು ಒಮ್ಮೆ
ಕೇಳದೇ ನಿಮಗೀಗ ದೂರದಲ್ಲಿ ಯಾರೋ

ಚೆಲುವೆಯ ಕಂಡಾಗ, ಚೆಲುವನ ಮನದಲ್ಲಿ
ನೂರಾಸೆ ಬಂದಾಗ
ಚೆಲುವೆಯ ಕಣ್ಣಲ್ಲಿ, ಚೆಲುವನು ಮನೆ ಮಾಡಿ
ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು
ಬೆರಗಾದರು ಒಲವಿಂದಲಿ ಒಂದಾದರು ಆಗ
ಕೇಳದೇ ನಿಮಗೀಗ ದೂರದಲ್ಲಿ ಯಾರೋ

ಈ ಊರಿನ ಜನಕ್ಕೂ, ಆ ಊರಿನ ಜನಕ್ಕೂ
ಹಿಂದಿನಿಂದ ದ್ವೇಷ
ಒಬ್ಬರನೊಬ್ಬರು ಕೊಲ್ಲೋಷ್ಟು ಆಕ್ರೋಶ
ಹೀಗಿದ್ರೂ ಆ ಪ್ರೇಮಿಗಳು ಹೆದರಲಿಲ್ಲ
ದಿನಾ ರಾತ್ರಿ ಊರೆಲ್ಲ ಮಲಗಿದ್ಮೇಲೆ
ಹಗ್ಗದ ಸೇತು ಮೇಲೆ ಇಬ್ಬರು ಸೇರ್ತಿದ್ರು

ಚೆಲುವೆಯ ಮಾವಯ್ಯ ಒಲವಿನ ಕಥೆ ಕೇಳಿ
ಹುಲಿಯಂತೆ ಎಗರಾಡಿ
ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ
ರೋಷದಲಿ ಕೂಗಾಡಿ
ಹಲ್ಲನ್ನೂ ಮಸೆದ ಸೇತುವೆಯಾ ಕಡಿದ

ಆ ಜೋಡಿಯ ಕಥೆಯಂದಿಗೆ ಕೊನೆಯಾಯಿತು ಹೀಗೆ
ಕೇಳದೇ ನಿಮಗೀಗ ದೂರದಲ್ಲಿ ಯಾರೋ



Credits
Writer(s): Chi Udayashanker, Ilayaraja
Lyrics powered by www.musixmatch.com

Link