O Entha Soundarya

ಓ, ಎಂಥ ಸೌಂದರ್ಯ ಕಂಡೆ
ಓ, ಎಂಥ ಸೌಂದರ್ಯ ಕಂಡೆ
ಆದಿಶಕ್ತಿಯೋ ಮಹಾಲಕ್ಷ್ಮಿಯೋ
ವಾಣಿಯೋ ಕಾಣೆನಾ
ಓ, ಎಂಥ ಸೌಂದರ್ಯ ಕಂಡೆ
ಓ, ಎಂಥ ಸೌಂದರ್ಯ ಕಂಡೆ

ಹೊಳೆಯುವ ಕಣ್ಣುಗಳೋ ಬೆಳಗುವ ದೀಪಗಳೋ
ತುಂಬಿದ ಕೆನ್ನೆಗಳೋ ಹೊನ್ನಿನ ಕಮಲಗಳೋ
ಅರಳಿದ ಹೂ ನಗೆಯಾಯ್ತೋ
ಚಂದ್ರಿಕೆಯೇ ಹೆಣ್ಣಾಯ್ತೋ
ನನಗಾಗೆ ಧರೆಗಿಳಿದ ದೇವತೆಯೋ ಏನೋ ಕಾಣೆನಾ
ಓ, ಎಂಥ ಸೌಂದರ್ಯ ಕಂಡೆ
ಓ, ಎಂಥ ಸೌಂದರ್ಯ ಕಂಡೆ

ಕಡಲಲೇ ಮುತ್ತಿರಲಿ ಲತೆಯಲೇ ಸುಮವಿರಲಿ
ನಯನವು ನೋಡುತಲಿ ಸಂತಸ ಹೊಂದಿರಲಿ
ಕರೆಯದಿರು ಕೆಣಕದಿರು ಬಯಕೆಗಳ ನುಡಿಯದಿರು
ನಿನ್ನನ್ನು ನೋಡುತಿರೆ ಕೈ ಮುಗಿವ ಆಸೆ ಏಕೋ ಕಾಣೆ

ಓ, ಎಂಥ ಸೌಂದರ್ಯ ಕಂಡೆ
ಓ, ಎಂಥ ಸೌಂದರ್ಯ ಕಂಡೆ
ಆದಿಶಕ್ತಿಯೋ ಮಹಾಲಕ್ಷ್ಮಿಯೋ
ವಾಣಿಯೋ ಕಾಣೆನಾ

ಓ, ಎಂಥ ಸೌಂದರ್ಯ ಕಂಡೆ
ಓಹೋ, ಎಂಥ ಸೌಂದರ್ಯ ಕಂಡೆ



Credits
Writer(s): Upendra Kumar, Chi Udayashanker
Lyrics powered by www.musixmatch.com

Link