Devare Kelu

ದೇವರೆ ಕೇಳು
ನ್ಯಾಯವೆ ಹೇಳು
ಕಣ್ತೆರೆದು ನೋಡು
ಈ ನಮ್ಮ ಪಾಡು
ಮಾನವ ನೋವಾದರೆ
ದೇವರ ತಾ ಹೇಳುವ
ದೇವರೆ ನೋವು ನೀಡಿರೆ
ಯಾರಿಗೆ ತಾ ಹೇಳುವ
ದೇವರೆ ಕೇಳು ನ್ಯಾಯವೇ ಹೇಳು

ಮರಗಿಡದ ಜೀವ ಕಳೆವ
ಕ್ರಿಮಿಗಳ ಕೊಲ್ಲುವುದು ನ್ಯಾಯ
ಗಿಳಿಗಳಿರೊ ಗೂಡಿನೊಳಗೆ
ಹಾವನು ಬಿಡುವುದು ಹೇಯ
ಹುಲಿಗೆ ಹುಲಿ ಬೇಟೆಯನುವ
ನಿಯಮವೆ ಮೃಗಳಿಗಿಲ್ವಾ
ಮನುಜ ಮನು ಏಕೋ ತಿಳಿಯೆ
ಮನುಜನೆ ಕೊಲ್ಲುತಿಹನಲ್ಲ
ಹಾಳಾದರೆ ದಾರ ಚೂರಾಗದೆ ಹಾರ
ಕಾಯೋ ದೇವ ಬಂಧು ಹಾಗೆ ಬಂದು ಬಾಳನು

ದೇವರೆ ಕೇಳು ನ್ಯಾಯವೆ ಹೇಳು

ಖುಷಿ ಪಡುತ ಬಾಳುತಿಹರು
ಕೇಡುಗರು ಇದು ಕಲಿಗಾಲ
ಸುಗುಣರಿಗೆ ನೋವು ಅಳಿವು
ಎಲ್ಲಿಯಿದೆ ಉಳಿಗಾಲ
ಬದುಕಿನಲಿ ಏನೇ ಬರಲಿ
ಎದುರಿಸೊ ಬಲವನು ನೋಡೊ
ಎದುರಿನಲಿ ಯಾರೆ ಬರಲಿ
ಮನಸನು ಅಚಲವ ಮಾಡೊ
ಹಾಲಾಹಲ ಇಲ್ಲಿ ಗಂಗಾಜಲ ಎಲ್ಲಿ
ನೀನೆ ತಾನೆ ನಮ್ಮ ದಿಕ್ಕು ಕೈ ಹಿಡಿ



Credits
Writer(s): Ilaiyaraja, V Nagendra Prasad
Lyrics powered by www.musixmatch.com

Link