Neenu Iruvaga

ನೀನು ಇರುವಾಗ, ಬೇರೇನು ಬೇಕಿಲ್ಲ
ನೀನು ನಗುವಾಗ, ನನ್ನಲ್ಲಿ ನಾನಿಲ್ಲ
ನೋಡುವಾಗ ನೀನಾಗಿ,ಕಳೆದು ಹೋದೆ ನಾನಗಿ
ಪ್ರೀತಿ ಬಂತು ತಾನಾಗಿ
ನಿನ್ನಿಂದಲೇ ಸೋತೆ ಒಪ್ಪಿಕೋ
ನೀನೆ ನನ್ನ ಪ್ರಾಣ ಅಪ್ಪಿಕೋ
ನಿನ್ನಿಂದಲೇ ಸೋತೆ ಒಪ್ಪಿಕೋ

ನಿನ್ನ ಮಾತಿಗೆ ಕಾದಿರುವೆ ದಿನವೆಲ್ಲಾ
ಒಂದು ಗೆರೆ ಹಾಕು ಕನಸಲ್ಲೂ ದಾಟಲ್ಲ
ಎಲ್ಲಕಿಂತ ಮೇಲಾಗಿ, ನಿನ್ನಲ್ಲಿರುವೆ ಹಾಯಾಗಿ
ಬಾಳಲಾರೆ ಬೇರಾಗಿ
ನಿನ್ನಿಂದಲೇ ಕಲಿತೆ ಪ್ರೀತಿಯ
ನೀನೆ ನನ್ನ ಎಲ್ಲ ಆಶಯ
ನಿನ್ನಿಂದಲೇ ಕಲಿತೆ ಪ್ರೀತಿಯ

ನೀ ಬರೋ ದಾರಿಯ ಕಾಯುತ ಕುಳಿತರೇ
ಹಗಲಿಗೂ ರತ್ರಿಗೂ ಯಾಕೋ ಸಂಶಯ
ನಿನ್ನ ಈ ಹೆಸರನ್ನು ಮೆಲ್ಲಗೆ ಕರೆದರೇ
ಗಾಳಿಗೂ ನಾಚಿಕೆ, ಏನು ವಿಸ್ಮಯ
ನಿನ್ನೊಳಗಿರುವ ನನ್ನ, ನಿನ್ನ ಕಣ್ಣಲ್ಲಿ ಕಂಡೆನು ನಾ
ಕಣ್ಣು ಮುಚ್ಚಿದರೂನೂ ನೀನೆ
ನಿನ್ನಿಂದಲೇ ಎಲ್ಲಾ ಕಲ್ಪನೆ
ಎಲ್ಲಿದ್ದರು ಬಿಡದ ಯೋಚನೆ
ನಿನ್ನಿಂದಲೇ ಎಲ್ಲಾ ಕಲ್ಪನೆ

ನಾಳೆಯ ಚಿಂತೆಯೂ ಪ್ರೀತಿಗೆ ಬಾರದು
ನಿನ್ನನ್ನು ಮರೆತರೆ ಭೂಮಿ ತಿರುಗದು
ನಿನ್ನ ಈ ಮಾತಲ್ಲಿ ನನಗೆ ನಾ ಜ್ಞಾಪಿಸಿ
ಹೃದಯವ ಕೊಟ್ಟೆ ನಾ ಚಂದಗಾಣಿಸಿ
ನಿನ್ನನು ಬಿಟ್ಟಿರಲಾರೆ ಯಾರೇನೇ ಹೇಳಿದರು
ಪ್ರಾಣವೇ ಹೋದರೂ ನಾವು ಒಂದೇನೆ
ನಿನ್ನಿಂದಲೇ ನನ್ನ ನಾಳೆಯೂ
ನೀನೇ ಬರೆದ ಹಳೆಯ ಹಾಳೆಯೂ
ನಿನ್ನಿಂದಲೇ ನನ್ನ ನಾಳೆಯೂCredits
Writer(s): Mani Sarma, Kalyan K
Lyrics powered by www.musixmatch.com

Link