Bangaradinda

ತಂದಾನ ತಂದನಾ

ತನ್ ತಂದಾನ
(ತಂದ)
(ತನ್) ತಂದಾನ
(ತಂದ)
(ತನ್) ತಂದಾನ
(ತಂದ)
(ತನ್) ತಂದಾನ
(ತಂದ)

ಬಂಗಾರದಿಂದ ಬಣ್ಣಾನ ತಂದ
ಸಾರಂಗದಿಂದ ನಯನಾನ ತಂದ
ಮಂದಾರವನ್ನು ಹೆಣ್ಣಾಗು ಎಂದ
ದಾಳಿಂಬೆಯಿಂದ ದಂತಾನ ತನ್ದ
ಮಕರಂದ ತುಂಬಿ ಅಧರಾನ ತಂದ
ನನ್ನನು ತಂದ ರುಚಿ ನೋಡು ಎಂದ

ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ

ಚಂದಮಾಮನಿಂದ ಹೊಳಪನು ತಂದ
ಬಾಳೆ ದಿಂಡಿನಿಂದ ನುಣುಪನು ತಂದ
ಅಂದ
ಹೇ
ಅಂದ
ಹೇ
ಆಂದ ಚಂದ ಹೊರುವ ಕಂಬದ ಜೋಡಿಗೆ ಮಿಂಚಿರಿ ಎಂದ
ಹಂಸದಿಂದ ಕೊಂಚ ನಡಿಗೆಯ ತಂದ
ನವಿಲಿಂದ ಕೊಂಚ ನಾಟ್ಯವ ತಂದ
ನಯವೊ
ಹೇ
ಲಯವೊ
ಹೇ
ನಯವೋ ಲಯವೋ ರೂಪಾಲಯವೋ ರಸಿಕನೇ ಹೇಳು ನೀ ಎಂದ
ತಂಗಾಳಿಯಿಂದ ಸ್ನೇಹಾನ ತಂದ
ಲತೆ ಬಳ್ಳಿ ಇಂದ ಸಿಗ್ಗನು ತಂದ
ಸಿಗ್ಗನು ಇವಳ ನಡುವಾಗು ಎಂದ
ನಡುವನ್ನು ಅಳಿಸಿ ಎದೆ ಭಾರ ತಂದ
ನನ್ನನ್ನು ಲತೆಗೆ ಮರವಾಗು ಎಂದ

ತಂದಾನ ತಂದ ತಂದಾನ ತಂದ

ಅಪರೂಪದಂದ ನನಗಾಗಿ ತಂದ

ಗಂಧ ತಂದನೋ ಗಮರುಗದಿಂದ
ರತಿಯ ತಂದನೋ ಅಮಲುಗಳಿಂದ
ಗಮಲ
ಹೇ
ಅಮಲ
ಹೇ
ಗಮಲ ಅಮಲ
ಕಂಪನ ಕಡಲ ದೋಣಿಗೆ ಕಾಮನ ತಂದ
ಭೂಮಿ ಸುತ್ತ ಇರೋ ಕಾಂತವ ತಂದ
ಬಾನಿನಿಂದ ಏಕಾಂತವ ತಂದ
ಒಲವು
ಹಾ
ಚೆಲುವು
ಹಾ
ಒಲವು ಚೆಲುವು ಕೂಡೋ ಕಲೆಗೆ
ಘರ್ಷಣೆ ಆಕರ್ಷಣೆ ತಂದ
ಕರಿ ಮೋಡದಿಂದ ಮುಂಗುರುಳ ತಂದ
ಕೋಲ್ಮಿಂಚಿನಿಂದ ರತಿ ನೋಟ ತಂದ
ಜಲಧಾರೆಯಿಂದ ಒಲವನ್ನು ತಂದ
ಒಲವನ್ನು ಓಡೊ ನದಿಯಾಗು ಎಂದ
ನನ್ನನು ನದಿಗೆ ಕಡಲಾಗು ಎಂದ

ಬಂಗಾರದಿಂದ ಬಣ್ಣಾನ ತಂದ
ಸಾರಂಗದಿಂದ ನಯನಾನ ತಂದ
ಮಂದಾರವನ್ನು ಹೆಣ್ಣಾಗು ಎಂದ

ತಂದಾನ ತಂದ ತಂದಾನ ತಂದ

ಅಪರೂಪದಂದ ನನಗಾಗಿ ತಂದ



Credits
Writer(s): Hamsalekha
Lyrics powered by www.musixmatch.com

Link