Hennu Chanda Hennu Chanda

ಹೆಣ್ಣು ಚಂದ ಹೆಣ್ಣು ಚಂದ, ಹೆಣ್ಣಿನ್ನಿವಳ ಕಣ್ಣು ಚಂದ...
ಈ ಚಂದ ಯಾತರಿಂದ ಕಣ್ಕಪ್ಪಿನ ಮೆರುಗಿಂದ...
ಆ ಕಣ್ಣಿನ ನೋಟದ ಮಾತಿಂದ, ಆ ಮಾತಿನ ಒಳಗಣ ಒಲವಿಂದ...
ಆ ಜೋಕಿನಿಂದ ನಾಜೂಕಿನಿಂದಾ...
ಹೆಣ್ಣು ಚಂದ ಹೆಣ್ಣು ಚಂದ ಹೆಣ್ಣಿನ್ನಿವಳ ಕಣ್ಣು ಚಂದ...
ಈ ಚಂದ ಯಾತರಿಂದ ಕಣ್ಕಪ್ಪಿನ ಮೆರುಗಿಂದ... ||
ಬಳಸಿರುವ ಪದಗಳಲೆ ಬರೆದರೆ ಹೆಣ್ಣಿಗೆ ಮೆರುಗಿಲ್ಲ ಮೇರುಗಿಲ್ಲಾ...
ಹೊಸ ಪದವ ಹರಸಿದರೆ ಅಂದವು ಮುಟ್ಟದ ಪದವಿಲ್ಲ ಪದವಿಲ್ಲಾ...
ಮಲ್ಲಿಗೆ ಎಂದರೆ ಮೈಯೂರಿ ಯಾಗುವಳು ಬಳ್ಳಿಲಿ ಎಂದರೆ ಕೋಗಿಲೆ ಯಾಗುವಳು...
ಎಲ್ಲಾ ಇವಳ ನಗುವಿಂದಾ...
ಆ ನಗುವಿನ ಬೆಳ್ಳಿ ಬೆಳಕಿಂದಾ...
ಆ ಬೆಳಕಿನ ಒಳಗಣ ಒಲವಿಂದ ಆ ಜೋಕಿನಿಂದ ನಾಜೂಕಿನಿಂದಾ...
ಹೆಣ್ಣು ಚಂದ ಹೆಣ್ಣು ಚಂದ ಹೆಣ್ಣಿನ್ನಿವಳ ಕಣ್ಣು ಚಂದ...
ಈ ಚಂದ ಯಾತರಿಂದ ವಾರೆನೋಟದ ಮೆರುಗಿಂದ... ||
ಚೆಲುವು ಇದೆ ಸೆಳೆತ ಇದೆ ಹೆಣ್ಣಾಭಿ ಮಾನದ ಹೆಮ್ಮೆ ಇದೆ ಹೆಮ್ಮೆ ಇದೆ...
ಹರೆಯವಿದೆ ಪ್ರಣಯವಿದೆ ಸೂರ್ಯನೇ ಬಿಡಿಸುವ ಧಳಗವಿವೆ ಧಳಗವಿವೇ...
ತಾವರೆ ಎಂದರೆ ನೀರಾ ಆಗುವಳು ಋತುಗಳೆಂದರೆ ಹಬ್ಬಗಳಾಗುವಳು...
ಎಲ್ಲಾ ಇವಳೇ ನೆನೆದಂತೆ ಆ ಮನಸಿನ ಸಾವಿರ ರಂಗಂತೆ...
ಆ ರಂಗಿನ ಒಳಗಣ ಒಲವಂತೆ ಆ ಜೋಕಿನಂತೆ ನಾಜುಕಿನಂತೆ...
ಹೆಣ್ಣು ಚಂದ ಹೆಣ್ಣು ಚಂದ ಹೆಣ್ಣಿನ್ನಿವಳ ಕಣ್ಣು ಚಂದ...
ಈ ಚಂದ ಯಾತರಿಂದ ಪ್ರೇಮ ನೋಟದ ಮೆರುಗಿಂದ...
ಹೆಣ್ಣು ಚಂದ ಹೆಣ್ಣು ಚಂದ ಹೆಣ್ಣಿನ್ನಿವಳ ಕಣ್ಣು ಚಂದ ||೨||



Credits
Writer(s): Hamsalekha Hamsalekha
Lyrics powered by www.musixmatch.com

Link