Mani Mani Mani

ಮಣಿ ಮಣಿ ಮಣಿ ಮಣಿ ಮನಿಗೊಂದು ದಾರ
ದಾರದ್ ಜೊತೆ ಮಣಿ ಸೇರಿ ಚಂದದೊಂದು ಹಾರ
ತಾನಿ ತಂದಾನಿ ತಂದಾನ ತಂದಾನಿ ತಂದಾನ ತಂದಾನಿ ತಂದಾನ ತಂದಾನನ
ತಾನಿ ತಂದಾನಿ ತಂದಾನ ತಂದಾನಿ ತಂದಾನ ತಂದಾನಿ ತಂದಾನ ತಂದಾನನ

ನಿನ್ ಹೆಸರೇನೋ ಮಣಿ ಅಂತ ಗೊತ್ತಾಯ್ತು
ಆದರೆ ಮಣಿ ಜೊತೆ ಇರೋ ದಾರದ ಹೆಸರೇ ಗೊತ್ತಾಗ್ಲಿಲ್ವಲ್ಲೇ

ಮಣಿ ಜೊತೆ ದಾರ ಇರೋಲ್ಲ
ದಾರದಲ್ಲಿ ಮಣಿ ಇರುತ್ತೆ ಅಂತ ಹೇಳೇ ಮಣಿ

ಗೊತ್ತಾಯ್ತ ಗೊತ್ತಾಯ್ತ
ಆದರೆ ದಾರಕ್ಕೊಂದ್ ಹೆಸರಿರ್ಬೇಕಲ್ಲ
ಒಸಿ ಉದಾರ ವಾಗ ಹೇಳಿದ್ರೆ ಆಗೋದಿಲ್ವಾ

ಹೆಣ್ಣು ಮಕ್ಕಳನ್ನ ಗಾಡೀಲ್ ಕೂರುಸ್ಕೊಂಡು ಹಿಂಗೆಲ್ಲ ಆಡಬಾರದು ಅಂತ ಒಸಿ ಹೇಳೇ ಮಣಿ

ಏನೋ ಹೆಸರು ಕೇಳಿದರೆ ಕೆಸ್ರಲ್ ಬಿದ್ದೊರ್ ಥರ ಆಡಬಾರದು ಅಂತ ಹೇಳೇ ಮಣಿ

ನನ್ ಹೆಸರು ಮಾತ್ರ ಕೇಳಿ ತಮ್ ಹೆಸರು ಹೇಳ್ದೆ ಇರೋದ್ ಬಲ್ ಮೋಸ ಅಂತ ಹೇಳೇ ಮಣಿ

ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ

ಹಂಗಾರೆ, ಗೋಪಿಕ ಸ್ತ್ರೀಯರು ಇದಾರಾ ಅಂತ ಈಗಲೇ ಕೇಳ್ಬಿಡೆ ಮಣಿ

ಛೆ ಛೆ ಅದೆಲ್ಲ ದ್ವಾಪರ ಯುಗಕ್ಕೆ
ಈ ಕಲಿಯುಗದ ಕೃಷ್ಣ ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲ
ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲ

ನನ್ನು ನೋಡಲ್ವಾ?
ನೋಡ್ತಾನೆ ಇದೀನಲ್ಲ

ಮಾತು ಮಾತಲ್ಲೇ ಮಾತು ಮರಸ್ಬ್ಯಾಡ ಅಂತ ಹೇಳೇ ಮಣಿ
ಇವಗಲ್ಲಾದ್ರು ಹೆಸರನ್ನ ಹೇಳಲಿ ಕನ್ಯಾಮಣಿ

ನನ್ ಹೆಸರು ಒಂದು ಹೂವಿನ ಹೆಸರ್ನಾಗೆ ಸೇರ್ಕೊಂಡೈತೆ ಅಂತ ಹೇಳೇ ಮಣಿ

ನನ್ ಹೆಸರು ಒಂದು ಹೂವಿನ ಹೆಸರ್ನಾಗೆ ಸೇರ್ಕೊಂಡೈತೆ ಅಂತ ಹೇಳೇ ಮಣಿ

ಅದು ಯಾವ ಹೂವು ಅದು ಯಾವ ಹೂವು
ನೆಲದ ಮ್ಯಾಲೈತೋ ಅಂಬರ ದಾಗೈತೋ
ನೆಲದ ಮ್ಯಾಲೈತೋ ಅಂಬರ ದಾಗೈತೋ
ಗೊತ್ತಗ್ಲಿಲ್ವಲೇ ಮಣಿ ಕಣ್ಮಣಿ

ನೆಲದ ಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೊಂಡೈತೆ
ನೆಲದ ಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೊಂಡೈತೆ
ಅಂತ ಹೇಳೇ ಮಣಿ ಬೇಗ ಹೇಳೇ ಮಣಿ

ಅಂಬರಕ್ಕೆ ಚಾಚ್ಕೊಂಡೈತೆ
ಅಂಬರ ಅಂದ್ರೆ ಕನಕಾಂಬರ
ಓ ಗೊತ್ತಾಯಿತು
ಕನಕ ಕನಕ ಕನಕ ಕನಕ
ಕನಕ ಕನಕ ಎಷ್ಟು ಚೆಂದಾಗೈತೆ
ಕನಕ ಕನಕ ಆಹಾ ಮುದ್ದಾಗೈತೆ

ಹೌದು ಹೌದು
ಚೆಂದಾಗೈತೆ
ಈಗ ಊರ್ ಹತ್ರಕ್ಕ್ ಬಂದೈತೆ ಗಾಡಿ ನಿಲ್ಸು ಅಂತ ಹೇಳೇ ಕನಕ



Credits
Writer(s): V. Manohar, Baraguru Ramachandrappa
Lyrics powered by www.musixmatch.com

Link