Endho Kaanadha

ಎಂದೂ ಕಾಣದ ಅಪರೂಪ ಅನುಭವ
ಎಲ್ಲೋ ಕಾದಿದೆ ನನಗಾಗಿ
ಬೀಸೋ ಗಾಳಿಯ ಇಂಪಾದ ಪರಿಮಳ
ಏನೋ ಹೇಳಿದೆ ನನಗಾಗಿ
ಹೃದಯದಿ ಅಲೆಯ ಮೀಟುವ ಹಾಗೆ
ಬಯಕೆಯ ನಿಧಿಯ ದೋಚುವ ಹಾಗೆ
ಬರಬೇಕು ಒಂದು ಸ್ವಪ್ನ ನನ್ನನ್ನೇ ಕೇಳುತ್ತ

ಎಂದೂ ಕಾಣದ ಅಪರೂಪ ಅನುಭವ
ಎಲ್ಲೋ ಕಾದಿದೆ ನನಗಾಗಿ
ಬೀಸೋ ಗಾಳಿಯ ಇಂಪಾದ ಪರಿಮಳ
ಏನೋ ಹೇಳಿದೆ ನನಗಾಗಿ

ಬಿಟ್ಟು ಬಂದೆನು ನಾನೀಗ
ನನ್ನ ನಿತ್ಯದ ಜಂಜಾಟ
ಒಂದು ವಿಸ್ಮಯ ತಾನಾಗಿ
ಖುಷಿ ನೀಡುತ್ತ ಬಳ್ಳಿ ಬಂದೀತಾ
ನೋಡೋ ಕಣ್ಣಿಗೆ ಇಲ್ಲುಂಟು
ನಾನಾ ಬಣ್ಣದ ವಿನ್ಯಾಸ
ಹಾಡೋ ಜೀವಕೆ ಎಂದೆಂದೂ
ಪ್ರತಿ ಸಾಲಲ್ಲು ಹೊಸ ವಿಶ್ವಾಸ
ಗಗನವೇ ಕೈಗೆ ನಿಲುಕಿರುವಾಗ
ಮನಸಲಿ ಮೋಡ ಚಲಿಸಿರುವಾಗ
ನಗಬೇಕು ಒಂದು ಚಂದ್ರ ನನ್ನನ್ನೇ ನೋಡುತ್ತಾ

(ಸರಿಗಸಪ
ಸರಿಗಮರಿ
ಮಪದಪರಿ)

ಅಂಗೈ ಮೇಲೆಯೇ ಕೂತಂಥ
ಚಿಟ್ಟೆಯಾಗಿದೆ ಈ ಪ್ರಾಯ
ನಾಲ್ಕೇ ದಿನಗಳ ಹಾರಾಟ
ಜೊತೆ ಸಿಕ್ಕಾಗ ಅತಿ ಆತ್ಮೀಯ
ಎಲ್ಲ ದಿಕ್ಕಿಗಿಗೂ ಜೋರಾಗಿ ಕೂಗಿ ಹೇಳುವೆ ಏನಂತೆ
ಈಗಿಂದೀಗಲೇ ನಾ ಸಿದ್ಧ
ಮರುಳಾಗೋಕೆ ಮನ ಬಂದಂತೆ
ಪಯಣದಿ ದಾರಿ ಮರೆತಿರುವಾಗ
ಹುಡುಕುತ ನಾನೇ ಕಳೆದಿರುವಾಗ
ಸಿಗಬೇಕು ಒಂದು ಜೀವ ನನ್ನನ್ನೇ ಕಾಯುತ್ತ

ಎಂದೂ ಕಾಣದ ಅಪರೂಪ ಅನುಭವ
ಎಲ್ಲೋ ಕಾದಿದೆ ನನಗಾಗಿ (ನನಗಾಗಿ)
ಬೀಸೋ ಗಾಳಿಯ ಇಂಪಾದ ಪರಿಮಳ
ಏನೋ ಹೇಳಿದೆ ನನಗಾಗಿ (ನನಗಾಗಿ)



Credits
Writer(s): Mano Murthy, Jayanth Kaikini
Lyrics powered by www.musixmatch.com

Link