Ninna Gungalli (From "Lifeu Ishtene")

ನಿನ್ನ ಗುಂಗಲ್ಲೇ ಚಲಿಸುವೆನು
ಬರಿ ನಿನ್ನನ್ನೇ ಬಯಸುವೆನು
ನನಗಾದಂತೆಯೇ ನಿನಗೂ ಆಗಲಿ
ಎಂದು ಗುಟ್ಟಾಗಿ ಶಪಿಸುವೆನು
ನೀನು ಸಿಕ್ಕಾಗ ನಟಿಸುವೆನು
ನನಗಾದಂತೆಯೇ ನಿನಗೂ ಆಗಲಿ
ಎಂದು ಗುಟ್ಟಾಗಿ ಶಪಿಸುವೆನು
ನೀನು ಸಿಕ್ಕಾಗ ನಟಿಸುವೆನು

ನಿನ್ನ ಗುಂಗಲ್ಲೇ ಚಲಿಸುವೆನು
ಬರಿ ನಿನ್ನನ್ನೇ ಬಯಸುವೆನು

ಆಟಿಗೆ ಅಂಗಡಿ ಮುಂದೆ ಮೈಯ್ಯ ಮರೆತ
ಮಗು ನಾನು ನಿನ್ನ ಎದುರು
ಆಗಾಗ ಮೂಡುವಂಥ ಮೌನದಿಂದ
ಅನುರಾಗ ಇನ್ನೂ ನವಿರು
ಹುಡುಕಿ ನಿನ್ನನು ಕಳೆದ ನನ್ನನು
ಬರಿ ನಿನ್ನಲೇ ಅರೆಸುವೆನು
ನಿನ್ನ ವಿಶ್ರಾಂತಿ ಕೆಡಿಸುವೆನು

ನಿನ್ನ ಗುಂಗಲ್ಲೇ ಚಲಿಸುವೆನು
ಬರಿ ನಿನ್ನನ್ನೇ ಬಯಸುವೆನು

ಮುಂಜಾನೆ ರೆಪ್ಪೆಗೊಂದು ಮುತ್ತು ನೀಡಿ
ಕನಸಿಗೆ ಕಾವು ಕೊಡುವೆ
ಕಣ್ಣಿಂದ ಆಚೆ ನೀನು ಹೋದಾಗೆಲ್ಲ
ಹಠಮಾರಿ ಆಗಿ ಬಿಡುವೆ
ನಿನ್ನ ಏಕಾಂತವ ನನಗೆಂದೇ ಇಡು
ಎಂದು ಒತ್ತಾಯ ಪಡಿಸುವೆನು
ನಿನ್ನ ಒಟ್ಟಾರೆ ಒಲಿಸುವೆನು

ನಿನ್ನ ಗುಂಗಲ್ಲೇ ಚಲಿಸುವೆನು
ಬರಿ ನಿನ್ನನ್ನೇ ಬಯಸುವೆನು
ನನಗಾದಂತೆಯೇ ನಿನಗೂ ಆಗಲಿ
ಎಂದು ಗುಟ್ಟಾಗಿ ಶಪಿಸುವೆನು
ನೀನು ಸಿಕ್ಕಾಗ ನಟಿಸುವೆನು
ನಿನ್ನ ಗುಂಗಲ್ಲೇ ಚಲಿಸುವೆನು
ಬರಿ ನಿನ್ನನ್ನೇ ಬಯಸುವೆನು



Credits
Writer(s): Mano Murthy, Jayanth Kaikini
Lyrics powered by www.musixmatch.com

Link