Kudinotave (From "Parichaya") - Male Vocals

ಕುಡಿನೋಟವೇ ಮನಮೋಹಕ ಒಡನಾಟವೇ ಬಲುರೋಚಕ
ಹುಡುಕಾಟವೇ ರೋಮಾಂಚಕ
ಕುಡಿನೋಟವೇ ಮನಮೋಹಕ ಒಡನಾಟವೇ ಬಲುರೋಚಕ

ನೀ ಬಂದು ಹೋದ ಜಾಗ ಉಸಿರಾಡಿದೆ ಉಸಿರಾಡಿದೆ
ಬೆರಳೆಲ್ಲ ಓಲೆ ಗೀಚಿ ಮಸಿಯಾಗಿದೆ ಮಸಿಯಾಗಿದೆ
ಕನಸೊಂದು ಕುಲುಕುತ ಕೈಯ ತುಸು ದೂರ ಚಲಿಸಿದೆ ಎಲ್ಲ
ಮನವೀಗ ಮರೆಯುತ ಮೈಯ ಗುರುತನ್ನೇ ಅರಸಿದೆ ಎಲ್ಲ
ನಿನ್ನಾ ಕಂಡಾಗಲೇ ಜೀವವು

ಕುಡಿನೋಟವೇ ಮನಮೋಹಕ ಒಡನಾಟವೇ ಬಲುರೋಚಕ

ಅನುರಾಗಕೀಗ ಮಾತೆ ಮಿತಿಯಾಗಿದೆ ಮಿತಿಯಾಗಿದೆ
ಜೊತೆಯಾದ ಮೇಲೆ ಪ್ರೀತಿ ಅತಿಯಾಗಿದೆ ಅತಿಯಾಗಿದೆ
ಮರೆಮಾಚಿ ಕರೆಯಲು ನೀನು ಮನಸಾರೆ ಪರವಶ ನಾನು
ನೆನಪಾಗಿ ಸುಳಿಯಲು ನೀನು ನವಿರಾದ ಪರಿಮಳವೇನು
ನೀನೇ ಈ ಜೀವದ ಭಾವವು

ಕುಡಿನೋಟವೇ ಮನಮೋಹಕ ಒಡನಾಟವೇ ಬಲುರೋಚಕ
ಹುಡುಕಾಟವೇ ರೋಮಾಂಚಕ



Credits
Writer(s): Jayant Kaikini, Jessie Gift
Lyrics powered by www.musixmatch.com

Link