Athi Aparupa (From "Athi Aparupa")

ಅತೀ ಅಪರೂಪ ಅವಳ ರೂಪ
ಮಿನುಮಿನುಗೋ ಆ ಕಣ್ಣ ದೀಪ

ಎಳೆಯ ಮಿಂಚ ಸಾಲು ಕೈಯ ಬೆರಳ ಗೊಂಚಲು
ಹವಳ ಬೆಳೆವ ತೋಟದಂತೆ ಕಡುಗೆಂಪು ತುಟಿಗಳು
ತಿದ್ದಿ ತೀಡಿದ ಶಿಲ್ಪ ಅಂಗ-ಅಂಗವೂ
ಎಂಥ ಮಾಟವು, ದಂತ -ದಂತ ದೇಹವು

ಅತೀ ಅಪರೂಪ ಅವಳ ರೂಪ
ಮಿನುಮಿನುಗೋ ಆ ಕಣ್ಣ ದೀಪ, um-hm-hm

ಅತೀ ಅಪರೂಪ ಅವಳ ರೂಪ
ಮಿನುಮಿನುಗೋ ಆ ಕಣ್ಣ ದೀಪ

ಪಾದ ಊರಿದಲ್ಲಿ ರಂಗವಲ್ಲಿ ಅರಳಿದೆ
ಕೊಂಚ ಸ್ಪರ್ಶ ಸೋಕಿದಲ್ಲಿ ಮದರಂಗಿ ಮೂಡಿದೆ
ನಗುವ ಸೊಬಗನು ನೋಡಿ ಬೆಳ್ಳಿ ಮೋಡವು
ಮೂರ್ಛೆ ಹೋದವು, ಅಸದಳಾಪ ಅಂದವು

ಅತೀ ಅಪರೂಪ ಅವಳ ರೂಪ
ಮಿನುಮಿನುಗೋ ಆ ಕಣ್ಣ ದೀಪ, um-hm-hm

ಅತೀ ಅಪರೂಪ ಅವಳ ರೂಪ
ಮಿನುಮಿನುಗೋ ಆ ಕಣ್ಣ ದೀಪ

ಮೈಯ ನುಣುಪು ಕಂಡು ರೇಷಮೆಗೂ ಬೇಸರ
ಅವಳು ಮುಡಿಯೆ ಚೆಂಗುಲಾಬಿ ಮಲ್ಲಿಗೆಗೆ ಮತ್ಸರ
ಕೆಂಪು ಕೆನ್ನೆಯ ಕಂಡು ಸಂಜೆ ನೇಸರ
ಬಿಟ್ಟು ಅಂಬರ ಸರಿದು ಹೋದ ಸರಸರ

ಅತೀ ಅಪರೂಪ ಅವಳ ರೂಪ
ಮಿನುಮಿನುಗೋ ಆ ಕಣ್ಣ ದೀಪ, um-hm-hm



Credits
Writer(s): Mano Murthy
Lyrics powered by www.musixmatch.com

Link