Ale Aleyo

ಅಲೆಯಲೆಯೋ ಅಲೆಮಾರಿ
ಕನಸುಗಳಲಿ ನೀ ಜಾರಿ
ಎಲ್ಲಿಹುದೋ ಹೇಳೋ ನಿನ ದಾರಿ
ಯಾರಯ್ಯ ನೀ ಅಲೆಮಾರಿ
ಯಾರಯ್ಯ ನೀ ಅಲೆಮಾರಿ

ಅಲೆಯಲೆಯೋ ಅಲೆಮಾರಿ
ಕನಸುಗಳಲಿ ನೀ ಜಾರಿ
ಅಲೆಯಲೆಯೋ ಅಲೆಮಾರಿ
ಕನಸುಗಳಲಿ ನೀ ಜಾರಿ
ಎಲ್ಲಿಹುದೋ ಹೇಳೋ ನಿನ ದಾರಿ
ಯಾರಯ್ಯ ನೀ ಅಲೆಮಾರಿ
ಯಾರಯ್ಯ ನೀ ಅಲೆಮಾರಿ

ಅಂಗಯ್ಯ ರೇಖೆಗಳೇ ಜಾತಕವ ಹೇಳೋ
ಹಾಲಕ್ಕಿ ಹಾಡಿನಲಿ ನಿನ್ನ ಕಥೆಯ ಕೇಳು
ಮೊದಲ್ಯಾವುದೋ
ಕೊನೆಯವುದೋ
ಗುರಿ ಯಾವುದೋ, ಗುರು ಯಾವನೋ ನೀ ಹೇಳೂ
ಹೇಳಯ್ಯ ನೀ ಅಲೆಮಾರಿ
ಯಾರಯ್ಯ ನೀ ಅಲೆಮಾರಿ

ನಿನಗಿಂದು ಯಾರಿಲ್ಲ ನಿನ್ನ ನೆರಳ ಹೊರತು
ಹರಿವ ಮಳೆ ನೀರಿನಲಿ ನಿನ್ನ ಹೆಜ್ಜೆ ಗುರುತು
ಅಳಲಾರದೆ
ನಗಲಾರದೆ
ಈ ಲೋಕದ ಪರಿವಿಲ್ಲದೆ ನಿನ್ನ ಬಾಳು
ಹೋಗಯ್ಯ ನೀ ಅಲೆಮಾರಿ
ಗುರಿ ಸೇರಯ್ಯ ನೀ ಅಲೆಮಾರಿ

ಅಲೆಯಲೆಯೋ ಅಲೆಮಾರಿ
ಕನಸುಗಳಲಿ ನೀ ಜಾರಿ
ಅಲೆಯಲೆಯೋ ಅಲೆಮಾರಿ
ಕನಸುಗಳಲಿ ನೀ ಜಾರಿ
ಎಲ್ಲಿಹುದೋ ಹೇಳೋ ನಿನ ದಾರಿ
ಯಾರಯ್ಯ ನೀ ಅಲೆಮಾರಿ
ಯಾರಯ್ಯ ನೀ ಅಲೆಮಾರಿ



Credits
Writer(s): S A Lokesh Kumar, D Sumana Kiththur
Lyrics powered by www.musixmatch.com

Link