Neene Kane

ನೀನೆ ಕಣೆ ನೀನೆ ಕಣೆ ನನ್ನೆದೆ ತುಂಬ ನೀನೆ ನೀನೆ
ನೀನೆ ಕಣೆ ನೀನೆ ಕಣೆ ನನ್ನೆದೆ ತುಂಬ ನೀನೆ ನೀನೆ
ನಂಬು ನನ್ನ ನನ್ನಾಣೆಗೂ ನಂಗೆಲ್ಲ ಇನ್ನು ನೀನೆ
ನೆಚ್ಚಿನ ಹುಡುಗನೆ ಮುದ್ದಿನ ಗೆಳೆಯನೆ
ಮೆಚ್ಚಿದೆ ನಿನ್ನನು ಬಾ ಸುಂದರನೆ
ಬೆಚ್ಚನೆ ಪ್ರೀತಿಯ ಬಚ್ಚಿಡಲಾರೆನು
ಹಿಡಿಸಿದೆ ಹುಚ್ಚನು ನೀನೊಂತರ

ನಿನ್ನ ನೋಟ ನಿನ್ನ ಆಟ
ಕಂಡು ಎಂದೋ ಕರಗಿದೆ ಹೃದಯ
ನಿನ್ನೆ ಮೊನ್ನೆ ಬಂದ ನೀನೇ
ನನ್ನ ಎಲ್ಲಾ ನಾಳೆಯ ಗೆಳೆಯ
ನಾನು ನೀನು ಒಂದಾಗಿರುವ
ಎಂದೂ ಹೀಗೆ ಕೊನೆವರೆಗೆ
ಪ್ರೀತಿ ಎಂಬ ಪಲ್ಲಕ್ಕಿ ಏರಿ
ಸಾಗುವ ನಾವು ಮೆರವಣಿಗೆ

ನೀನೆ ಕಣೆ ನೀನೆ ಕಣೆ ನನ್ನೆದೆ ತುಂಬ ನೀನೆ ನೀನೆ

ಯಾರೊ ನೀನು ಯಾರೋ ನಾನು
ಇಂಥ ಸಲುಗೆ ಬೆಳೆಯಿತು ಹೇಗೇ
ಕಾಣೆ ನಾನು ಕಾರಣವೇನು
ಅಂತಾರೆಲ್ಲ ಪ್ರೀತಿಯೆ ಹೀಗೆ
ಅದಲು ಬದಲು ಆಗಿದೆ ಹೃದಯ
ತಿರುಗಿ ಕೊಡುವ ಮಾತಿಲ್ಲ
ನಿಮಿಷ ಕೂಡ ಅಗಲಿ ದೂರ
ಇರಲು ನಂಗೆ ಆಗೋದಿಲ್ಲ
ನೀನೆ ಕಣೆ ನೀನೆ ಕಣೆ ಈ ಕಣ್ಣ ತುಂಬ ನೀನೆ ನೀನೆ
ನೀನೆ ಕಣೆ ನೀನೆ ಕಣೆ ನನ್ನೆದೆ ತುಂಬ ನೀನೆ ನೀನೆ



Credits
Writer(s): Kaviraj, V. Harikrishna
Lyrics powered by www.musixmatch.com

Link