Yaaru Ee Bhoomige

ಯಾರು ಈ ಭೂಮಿಗೆ ಪ್ರೀತಿ ಯಾ ತಂದರು
ಪ್ರೀತಿಸಿ ಪ್ರೀತಿಸಿ ಸಾಯಿರಿ ಅಂದರು
ಎಲ್ಲಾ ಯಾಮಾರಿ ಯಾಮಾರಿ ಮೋಸ ಹೋದರು
ಪ್ರೇಮ ಹಿಂಗೇನಾ, ಪ್ರೀತಿ ಇಷ್ಟೇನಾ
ಯಾರು ಈ ಭೂಮಿಗೆ ಪ್ರೀತಿಯಾ ತಂದರು
ಪ್ರೀತಿಸಿ ಪ್ರೀತಿಸಿ ಸಾಯಿರಿ ಅಂದರು

ಆಕಾಶ ಈ ಭೂಮಿ, ಮೊದಲಿಂದ ಪ್ರೇಮಿಗಳು
ಯಾರ್ಯಾರು ಬಂದೋದ್ರು, ಮುರಿದಿಲ್ಲ ಪ್ರೇಮ
ದೇವ್ರನ್ನ ಹಸಿವನ್ನ ತೋರ್ಸೋಕೆ ಸಾಧ್ಯಾನಾ
ನಂಬಿಕೆಯು ಹಾಗೇನೇ ಓ ಜಾಣ ಕೇಳು
ಪ್ರೀತೀಲೀ ಅನುಮಾನ ಪ್ರೀತಿಗೇ ಅವಮಾನ
ಸ್ನೇಹಾನ ದೋಷಾನಾ ಏನ್ ಈ ದಿನ
ಸ್ನೇಹಾನಾ ಪ್ರೀತಿನಾ
ಸ್ನೇಹಾನಾ ಪ್ರೀತಿನಾ

ಬಿಡಬೇಡ ಬಿಡಬೇಡ, ಪ್ರೀತಿ ಕೈ ಬಿಡಬೇಡ
ಭೂಮಿಯ ಸಂತೇಲೀ ಕಳ್ದೊಯ್ತಿ ಅಯ್ಯೋ
ಸುಡ ಬೇಡ ಸುಡ ಬೇಡ ಪ್ರೀತಿನ ಸುಡ ಬೇಡ
ನಿಲ್ಲೋಕ್ಕೆ ನೆಲೆ ಇಲ್ಲದೆ ನಲ್ಗೋಯ್ತಿ ಅಯ್ಯೋ
ಒಂದ್ಮಾತು ಬರಬಹುದು, ಒಂದ್ಮಾತು ಹೋಗವುದು
ಕಾಯೋದು ಕೊಲ್ಲೋದು ಆಲೋಚಿಸು
ಸ್ನೇಹಾನಾ ಪ್ರೀತಿನಾ
ಸ್ನೇಹಾನಾ ಪ್ರೀತಿನಾ

ಯಾರು ಈ ಭೂಮಿಗೆ ಪ್ರೀತಿಯಾ ತಂದರು
ಪ್ರೀತಿಸಿ ಪ್ರೀತಿಸಿ ಸಾಯಿರಿ ಅಂದರು
ಎಲ್ಲಾ ಯಾಮಾರಿ ಯಾಮಾರಿ ಮೋಸ ಹೋದರು
ಪ್ರೇಮ ಹಿಂಗೇನ, ಪ್ರೀತಿ ಇಷ್ಟೇನಾ



Credits
Writer(s): V. Nagendra Prasad, V Harikrishna
Lyrics powered by www.musixmatch.com

Link