Kannu Kannu

ಹೆಣ್ಣು: ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಗಂಡು: ಮುತ್ತಿನಂತ ನಿನ್ನ ಮಾತು
ಆಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ.ಪ್ರೀತಿಗೆ ಹೆಸರಾಗಿ
ಹೆಣ್ಣು: ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಗಂಡು: ಆ ನನ್ನಾ ಕನಸು ಇಂದು ನಿಜವಾಯ್ತು
ಹೆಣ್ಣು: ಅಂದು ನೀನು ಬಳಿ ಬಂದೆ
ಮನದ ಪ್ರೀತಿ ತಿಳಿ ಅಂದೆ
ನಾನು ನಿನ್ನ ಮನಸನು ಅರಿಯದೆ ಹೋದೆ.ಆ.ಅ
ಗಂಡು: ಇಂದು ನೀನು ಜೊತೆಯಾದೆ
ಎದೆಯ ತುಂಬಿ ಉಸಿರಾದೆ
ನಿನ್ನ ಮಾತು ಕೇಳುತ ಬೆರೆಯುತ ಹೋದೆ.ಹಾ
ಹೆಣ್ಣು: ಅರಳಿದ ತನುವು ಕುಣಿದಿದೆ ಮನವು
ಸೋತು ಹೋದೆನು ಜಾಣ
ಗಂಡು: ಸವೆಯದ ನೆನಪು ಸವಿದರೆ ಸಾಕು
ಹಾರಿ ಹೋಗಲಿ ಪ್ರಾಣ
ಹೆಣ್ಣು: ಕೊನೆವರೆಗೂ ಹೀಗೆ ಪ್ರೇಮಿಗಳ ಹಾಗೆ
ನಡೆಸೋಣ ಬಾಳ ಪಯಣ
ಗಂಡು: ಹೇಯ್.ಎಂದೆಂದು ನಿನಗಾಗಿ
ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ.ಪ್ರೀತಿಗೆ ಹೆಸರಾಗಿ
ಹೆಣ್ಣು: ಆಹಾ.ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಗಂಡು: ಹಾ.ಮುತ್ತಿನಂತ ನಿನ್ನ ಮಾತು
ಅಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಹೆಣ್ಣು: ಯಾರು ಇರದ ಮನಸಿನಲಿ
ಬಂದೆ ನೀನು ಕ್ಷಣದಲ್ಲಿ
ನಿನ್ನ ಒಲವು ಎಂದೂ ಹೀಗೆ ಇರಲಿ
ಗಂಡು: ನೀನು ಇರದ ಬಾಳಿನಲಿ
ಹೇಗೆ ತಾನೆ ನಾನಿರಲಿ
ನಿನ್ನ ಸನಿಹ ಎಂದೂ ಹೀಗೆ ಇರಲಿ
ಹೆಣ್ಣು: ಹಾ.ಮನಸಿನ ತೆರೆಯ ಸರಿಸಿದೆ ಗೆಳೆಯ
ಸೋತು ಹೋಯಿತು ಹೃದಯ
ಗಂಡು: ಕನಸಿನ ವಿಷಯ ಹೇಳುವ ಸಮಯ
ಹಾಡು ಅಂತು ಈ ಹರೆಯ
ಹೆಣ್ಣು: ನಿನ್ನಿಂದ ನಾನು ನಿನಗಾಗಿ ನಾನು
ನಿನ್ನವಳೆ ನಾನು ಗೆಳೆಯ
ಗಂಡು: ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ.ಪ್ರೀತಿಗೆ ಹೆಸರಾಗಿ
ಹೆಣ್ಣು: ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಗಂಡು: ಹಾ.ಮುತ್ತಿನಂತ ನಿನ್ನ ಮಾತು
ಅಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಇಬ್ಬರೂ: ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹಾ.ಪ್ರೀತಿಗೆ ಹೆಸರಾಗಿ
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ.ಪ್ರೀತಿಗೆ ಹೆಸರಾಗಿ.ಹೋಯ್.



Credits
Writer(s): K. Kalyan, Sridhar Saravanan
Lyrics powered by www.musixmatch.com

Link