Bidenu Ninna Paadha - Original

ರಾಘವೇಂದ್ರ ನೀ ಮೌನವಾದರೆ ನನ್ನ ಗತಿಯೇನು
ನಿನ್ನ ಕರುಣೆಯ ಜ್ಯೋತಿ ಬಾಳ ಬೆಳಗುವತನಕ
ಬಿಡೆನು ನಿನ್ನ ಪಾದ
ಬಿಡೆನು ನಿನ್ನ ಪಾದ

ಭೂಮಿಯು ಬಿರಿಯಲಿ
ಗಗನವು ನಡುಗಲಿ
ಭೂಮಿಯು ಬಿರಿಯಲಿ ಗಗನವು ನಡುಗಲಿ
ಸಾಗರ ಕೆರಳಲಿ ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ
ಬಿಡೆನು ನಿನ್ನ ಪಾದ
ಬಿಡೆನು ನಿನ್ನ ಪಾದ
ಗುರುವೇ, ಬಿಡೆನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತನಕ
ಅಂಧಕಾರವನು ಅಳಿಸುವ ತನಕ
ಬಿಡೆನು ನಿನ್ನ ಪಾದ
ನಿನ್ನ ನಾಮ ವೇದ
ಬಿಡೆನು ನಿನ್ನ ಪಾದ
ಗುರುವೇ, ಬಿಡೆನು ನಿನ್ನ ಪಾದ

ಮುಡಿದ ಹೂಗಳು ಮುದುಡಿ ಹೋಗುತ ಬಾಡುತಿವೆ ಬಾಡುತಿವೆ
ಅರಿಶಿನ ಕುಂಕುಮ ಬೆವರಲಿ ಬೆರೆತು ಕರಗುತಿದೆ ಕರಗುತಿದೆ

ನನ್ನ ಕೊರಳ ಮಾಂಗಲ್ಯವು ಕಳಚಿ ಜಾರುತಿದೆ ಜಾರುತಿದೆ
ಬಾಳಿನ ಜ್ಯೋತಿಯು ಗಾಳಿಗೆ ಸಿಲುಕಿ ಆರುತಿದೆ ಆರುತಿದೆ
ಮೊರೆಯ ಕೇಳದೆ ಕರುಣೆ ತೋರದೆ
ಕಾಣ ಮೊಳಿಸದೆ ನನ್ನ ಹರಸದೆ

ಬಿಡೆನು ನಿನ್ನ ಪಾದ
ಬಿಡೆನು ನಿನ್ನ ಪಾದ

ಭೂಮಿಯು ಬಿರಿಯಲಿ ಗಗನವು ನಡುಗಲಿ
ಸಾಗರ ಕೆರಳಲಿ ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ
ಗುರುವೇ, ಬಿಡೆನು ನಿನ್ನ ಪಾದ

ದುಷ್ಟ ಶಕ್ತಿಯು ಅಟ್ಟಹಾಸದಲಿ ನಗುತಲಿದೆ ನಲಿಯುತಿದೆ
ದಮನ ಮಾಡುವ ದೈವ ಶಕ್ತಿಯು ಕಾಣಿಸದೇ ಕೆಣಕುತಿದೆ

ಅಳುವ ಹೆಣ್ಣಿನ ಆರ್ತನಾದವು ಕೇಳಿಸದೇ ದಯೆಬರದೇ
ದಾರಿಕಾಣೆನು ರಾಘವೇಂದ್ರನೇ ನೀ ಬರದೇ ಕೈ ಬಿಡದೇ
ಸಹಿಸೋ ಶಕ್ತಿಯ ನೀನು ದಹಿಸದೆ
ದೈವ ಶಕ್ತಿಯ ಮಹಿಮೆ ತೋರದೆ

ಬಿಡೆನು ನಿನ್ನ ಪಾದ
ಗುರುವೇ, ಬಿಡೆನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತನಕ
ಅಂಧಕಾರವನು ಅಳಿಸುವ ತನಕ
ಬಿಡೆನು ನಿನ್ನ ಪಾದ
ನಿನ್ನ ನಾಮ ವೇದ

ರಾಘವೇಂದ್ರ
ರಾಘವೇಂದ್ರ
ಯೋಗೀಂದ್ರ
ಯೋಗೀಂದ್ರ
ರಾಘವೇಂದ್ರ
ರಾಘವೇಂದ್ರ



Credits
Writer(s): Rajan Nagendra, Chi Udaya Shankar
Lyrics powered by www.musixmatch.com

Link