Aa Karnananthe

ಆ ಕರ್ಣನಂತೆ ನೀ ದಾನಿಯಾದೆ, ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ ನೀ ದಾನಿಯಾದೆ, ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ

ಕಸದಂತೆ ಕಂಡರೂ, ಮನೆಯಲ್ಲಿ ಎಲ್ಲರು
ದಿನವೆಲ್ಲಾ ಬಾಳಲಿ, ಕಣ್ಣೀರು ತಂದರೂ

ಕಸದಂತೆ ಕಂಡರೂ, ಮನೆಯಲ್ಲಿ ಎಲ್ಲರು
ದಿನವೆಲ್ಲಾ ಬಾಳಲಿ, ಕಣ್ಣೀರು ತಂದರೂ
ನಿನ್ನಂತರಂಗವಾ ಅವರೇನು ಬಲ್ಲರು
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು

ಆ ಕರ್ಣನಂತೆ ನೀ ದಾನಿಯಾದೆ, ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ

ಬಾಳೆಂಬ ಆಟದಿ ಚೆಂಡಂತೆ ಎಲ್ಲರು
ತನ್ನಾಸೆಯಂತೆಯೇ ಆಡೋದು ದೇವರು

ಬಾಳೆಂಬ ಆಟದಿ ಚೆಂಡಂತೆ ಎಲ್ಲರು
ತನ್ನಾಸೆಯಂತೆಯೇ ಆಡೋದು ದೇವರು
ಇಂದಲ್ಲಾ ನಾಳೆ ಸಾಯೋದೆ ಎಲ್ಲರು
ಏನಾದರೇನೀಗಾ ನಿನ್ನನ್ನು ಮರೆಯರು

ಪ್ರೀತಿಯಲಿ ಸುಖವುಂಟು, ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು

ಪ್ರೀತಿಯಲಿ ಸುಖವುಂಟು, ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು
ಬಂಗಾರದಂಥ ಗುಣವು ನಿನ್ನಲ್ಲಿ ಇರುವಾಗ
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು

ಆ ಕರ್ಣನಂತೆ ನೀ ದಾನಿಯಾದೆ, ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ

Credits
Writer(s): Chi Udayashanker, M Ranga Rao
Lyrics powered by www.musixmatch.com

Link