Aha Enidenidu

ಆಹಾ ಎನಿದೆನಿದೇನು
ಚಿತ್ತಾರ ಭೂಮಿ ಭಾನು
ಅಪರೂಪವೀ ಪ್ರತಿರೂಪ
ಪ್ರತಿ ಜೀವದಲು ಆಲಪಾ

ಏನಂದ ಆನಂದವೋ
ಆಹಾ ಎನಿದೆನಿದೇನು
ಚಿತ್ತಾರ ಭೂಮಿ ಭಾನು
ಅಪರೂಪವೀ ಪ್ರತಿರೂಪ
ಪ್ರತಿ ಜೀವದಲು ಆಲಪಾ

ಏನಂದ ಆನಂದವೋ

ಎಲೆಗಳ ಮೇಲೆ ರವಿ ಕಿರಣದ ನರ್ತನ
ಹಕ್ಕಿಗಳ ಗಾಯನ (ತಕೀಟ ತಕಧಿಮಿತ)
ಎಲ್ಲವೂ ವಿನೂತನ (ತಯಕ್ಕೂ ತಾಧಿನ)
ಇಂಥ ಪುಣ್ಯ ಮಣ್ಣಿನಲ್ಲಿ ಹುಟ್ಟುವುದೇ ಪಾವನ
ಪತ್ರಪುಷ್ಪ ಸಿಂಚನ (ದಿದ್ದಿದ್ಥೈ ದಿದ್ದಿದ್ಥೈ)
ಚಿತ್ತ ಚಂದ ಚೇತನ (ಪುತಲಾಂಗು ಪುಟ್ಲ್ ಕೈ)
ಕಿವಿ ಹಂಗಮ ನೋಟ ಸಂಭ್ರಮ
ಈಗೆಲ್ಲಾ ಶೂನ್ಯ ಶೂನ್ಯ ಶೂನ್ಯ
ನನ್ನ ದೇವರು ಈ ನನ್ನ ತವರು
ನಾನೆಂಥ ಧನ್ಯ ಧನ್ಯ ಧನ್ಯ
ಭೂಮಿಯೇ, ನೀನೆಂಥ ಮಮತಾಮಯಿ

ಆಹಾ ಎನಿದೆನಿದೇನು
ಚಿತ್ತಾರ ಭೂಮಿ ಭಾನು
ಅಪರೂಪವೀ ಪ್ರತಿರೂಪ
ಪ್ರತಿ ಜೀವದಲು ಆಲಪಾ

ಏನಂದ ಆನಂದವೋ

ಈ ಸುಂದರ ವಸುಂಧರಾ
ನಾನೆಲ್ಲೂ ಕಾಣಲೇ ಇಲ್ಲಾ
ಉಲ್ಲಾಸವೇ ಉಕ್ಕೇರುತ
ಎಲ್ಲೆಲ್ಲೂ ಚಿಗುರಿದೆ ಎಲ್ಲಾ
ಎಳೆಗರು ಅಂಬಾ ಎಂದು
ಓಡೋಡಿ ಬರುತ್ತಿರೋ ಹಾಗೆ
ಸಿಂಗಾರದ ಈ ಮಡಿಲಿಗೆ
ನಾನೋಡಿ ಬಂದೆನು ಹೀಗೆ
ದಡ ಸೇರಿಸಿತು ಈ ಸೆಳೆತ
ಅದಕ್ಕಾಗಿ ಸಡಗರ ತುಡಿತ
ಹಸಿರೇ, ಉಸಿರದೆ ಈ ಜೀವಕೆ

ಆಹಾ ಎನಿದೆನಿದೇನು
ಚಿತ್ತಾರ ಭೂಮಿ ಭಾನು
ಅಪರೂಪವೀ ಪ್ರತಿರೂಪ
ಪ್ರತಿ ಜೀವದಲು ಆಲಪಾ

ಏನಂದ ಆನಂದವೋ



Credits
Writer(s): V. Manohar
Lyrics powered by www.musixmatch.com

Link