Bandiddu Barali - From "Shyloo"

ಬಂದಿದ್ದು ಬರಲಿ ಎಂದು ಮುಂದೆ ನುಗ್ಗು ನುಗ್ಗು ಎಂದೂ ನೀ ಗೆಲ್ಲುವೆ, ನೀ ಗೆಲ್ಲುವೆ
ಇಂದಲ್ಲ ನಾಳೆ ನಿನ್ಗೂ ಒಳ್ಳೆ ಕಾಲ ಉಂಟೇ ಉಂಟು ನೀ ಗೆಲ್ಲುವೆ, ನೀ ಗೆಲ್ಲುವೆ
ಈ ಬದುಕು ಹೀಗೇನೆ, ತಡೆ ನೂರಾರಿದೆ ಇಲ್ಲಿ
ಛಲಯಿದ್ದಾಗ ನೀ ಗೆಲ್ಲುವೆ
ನಿನ್ನ ಗುರಿಯನ್ನು ನೀ ಮುಟ್ಟುವೆ (ನೀ ಮುಟ್ಟುವೆ, ವೆ)

ಬಂದಿದ್ದು ಬರಲಿ ಎಂದು ಮುಂದೆ ನುಗ್ಗು ನುಗ್ಗು ಎಂದೂ ನೀ ಗೆಲ್ಲುವೆ, ನೀ ಗೆಲ್ಲುವೆ
ಇಂದಲ್ಲ ನಾಳೆ ನಿನ್ಗೂ ಒಳ್ಳೆ ಕಾಲ ಉಂಟೇ ಉಂಟು ನೀ ಗೆಲ್ಲುವೆ, ನೀ ಗೆಲ್ಲುವೆ

ಇರುಳುಗಳ ಸಂಕೋಲೆ ಹರಿದು ಬರಲಿ ಒಂದು ದೀಪಾವಳಿ
ಕನಸುಗಳ ಕಂತೇನ ಬಿಡಿಸು ನನಸು ಆಗೋ ಈ ಹೊತ್ತಲಿ
ಆಕಾಶದಲ್ಲಿ ಹೊಸ ಸೂರ್ಯ ಬಂದ
ಚೆನ್ನಾಗಿ ನೀವಿರಿ ಅಂತಂದಾ
ಬೆವರೋ ಹನಿ ಮುತ್ತಾಗಿದೆ (ಮುತ್ತಾಗಿದೆ)
ಭಳಾರೆ ಭಳಾರೆ ಗಮತ್ತು ಇದುವೆ

ಬಂದಿದ್ದು ಬರಲಿ ಎಂದು ಮುಂದೆ ನುಗ್ಗು ನುಗ್ಗು ಎಂದೂ ನೀ ಗೆಲ್ಲುವೆ, ನೀ ಗೆಲ್ಲುವೆ
ಈ ಬದುಕು ಹೀಗೇನೆ, ತಡೆ ನೂರಾರಿದೆ ಇಲ್ಲಿ (ಇಲ್ಲಿ)
ಛಲಯಿದ್ದಾಗ ನೀ ಗೆಲ್ಲುವೆ (ಗೆಲ್ಲುವೆ)
ನಿನ್ನ ಗುರಿಯನ್ನು ನೀ ಮುಟ್ಟುವೆ (ವೆ, ವೆ, ವೆ, ವೆ)

ಹೊಸ ಜಗವು ನಮ್ಮನ್ನು ಹರಸಿ ಬಿಗಿದು ತಬ್ಬಿಕೊಂಡಾಗಿದೆ
ಹೊಸ ಜನರು ನಮ್ಮನ್ನು ನಗಿಸಿ ಬಂಧ ಬೆಸೆದು ನಿಂತಾಗಿದೆ
ಸಂತೋಷ ಎದೆಯಲಿ ಹಾಡಾಗಿದೆ
ಹೇಗಿದ್ದ ಬಾಳುವೆ ಹೇಗಾಗಿದೆ
ಹಸಿರಾಗಿದೆ ಎಲ್ಲಾ ಕಡೆ
ಅನಂತ ಅನಂತ ವಸಂತ ಇದುವೆ

ಬಂದಿದ್ದು ಬರಲಿ ಎಂದು ಮುಂದೆ ನುಗ್ಗು ನುಗ್ಗು ಎಂದೂ ನೀ ಗೆಲ್ಲುವೆ, ನೀ ಗೆಲ್ಲುವೆ
ಇಂದಲ್ಲ ನಾಳೆ ನಿನ್ಗೂ ಒಳ್ಳೆ ಕಾಲ ಉಂಟೇ ಉಂಟು ನೀ ಗೆಲ್ಲುವೆ, ನೀ ಗೆಲ್ಲುವೆ
ಈ ಬದುಕು ಹೀಗೆ, ತಡೆ ನೂರಾರಿದೆ ಇಲ್ಲಿ (ಇಲ್ಲಿ)
ಛಲಯಿದ್ದಾಗ ನೀ ಗೆಲ್ಲುವೆ (ಗೆಲ್ಲುವೆ)
ನಿನ್ನ ಗುರಿಯನ್ನು ನೀ ಮುಟ್ಟುವೆ



Credits
Writer(s): Kaviraj, Jessie Gift
Lyrics powered by www.musixmatch.com

Link