Kannale Kusuri

ಕಣ್ಣಾಲೇ ಕುಸುರಿ ಕೆಲಸ ಶುರುವಾಯ್ತು
ಮುತ್ತಲೆ ಸಾಣೆ ಹಿಡಿಯೋ ಮನಸಾಯ್ತು
ನೆನಪನೆಲ್ಲಾ ನೆನೆ ಹಾಕಿ ಗೊನೆ ಕಟ್ಟಿದಂತ ಕನಸಾಯ್ತು
ಪ್ರೀತಿಗೆ ನವ್ಗಾಳೆ ಒಕ್ಕಲು ಯಾವಾಗಲೂ ಮಾತೆಲ್ಲಾ ಬಾಗಿನ ಮನಸೆಲ್ಲ ಗ್ರಾಮೀಣ
ಕಣ್ಣಾಲೇ ಕುಸುರಿ ಕೆಲಸ ಶುರುವಾಯ್ತು
ಮುತ್ತಲೆ ಸಾಣೆ ಹಿಡಿಯೋ ಮನಸಾಯ್ತು
ನೆನಪನೆಲ್ಲಾ ನೆನೆ ಹಾಕಿ ಗೊನೆ ಕಟ್ಟಿದಂತ ಕನಸಾಯ್ತು
ಪ್ರೀತಿಗೆ ನವ್ಗಾಳೆ ಒಕ್ಕಲು ಯಾವಾಗಲೂ ಮಾತೆಲ್ಲಾ ಬಾಗಿನ ಮನಸೆಲ್ಲಾ ಗ್ರಾಮೀಣ
ಮುಟ್ಟಿದೊಡನೆ ಕುಂಬಾರಿಕೆಯಾ ಕಲಿಸುತಿದೆ ನಿನ್ನಂದ ಎನ್ ಚಂದವೋ ನಡು ತಂಬಿಗೆ ತಲೆ ಕೆಡಿಸಿದೆ ಎದೆ ಬಿಂದಿಗೆ
ನಾಚಿದೊಡನೆ ನೇಕಾರಿಕೆಯಾ ಕಲೆಯು ಕೈಗೆ ವಶವಾಯ್ತು ಸಿಂಗರಿಸಲಾ ತುಟಿ ಹಾಸಿಗೆ
ಹೃದಯಾ ನಮ್ ಗುಡಿಸಲು ಬಾರೆ ಕಸ ಗುಡಿಸಲು ಪ್ರೀತಿ ಸಿಂಪಡಿಸಲು ಅಪ್ಪೋದೆ ಕಂದಾಯ ಒಪ್ಪೋದೆ ಬೇಸಾಯ
ಕಣ್ಣಾಲೇ ಕುಸುರಿ ಕೆಲಸ ಶುರುವಾಯ್ತು
ಮುತ್ತಲೆ ಸಾಣೆ ಹಿಡಿಯೋ ಮನಸಾಯ್ತು
ಹುಲ್ಲು ಮೆದೆಯ ದಾರಿಯಲಿ ಹುಣ್ಣಿಮೆಯಾ ಬಂಡಿಯಿದೆ ಹೂಂ... ಎಂದರೆ ಕಮ್ಮಾರಿಕೆ ಶುರುಮಾಡಲಾ ಅಭಿಸಾರಿಕೆ
ಉತ್ತಕಾಳು ಮೊಳಕೆ ಹೊಡೆದು ಮಣ್ಣಾ ಬಾಗಿಲ ತೆರೆದು ಹೊರಬರುವ ಆ ಜೀವಂತಿಕೆ
ಅರೆ ಆ ಆಶ್ಚರ್ಯಕೆ ನಗೆಯ ನೂಳುವಿಕೆ ಎದೆಯ ಕುಲ ಕಸುಬಿಗೆ ಆಸೆನೆ ಸೋಪಾನ ಹಾಡೋಣ ಸೋಬಾನ
ಆ ಕಣ್ಣಾಲೇ ಕುಸುರಿ ಕೆಲಸ ಶುರುವಾಯ್ತು
ಮುತ್ತಲೆ ಸಾಣೆ ಹಿಡಿಯೋ ಮನಸಾಯ್ತು



Credits
Writer(s): Kalyan K, V Sridhar Murthy
Lyrics powered by www.musixmatch.com

Link