Deepavali Deepavali

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು
ಮಾವ ಮಗುವಾದನು

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು
ಮಾವ ಮಗುವಾದನು

ಹೆತ್ತೋರ ಆಸೆಯ ಮನ್ನಣೆ ಮಾಡಿ
ಕೊಟ್ಟೋರ ಹೆಣ್ಣನು ಮುದ್ದಾಗಿ ನೋಡಿ
ಇದ್ದಗ ಹೋಳಿಗೆ ತಿನ್ನುತ ಹಾಡಿ
ಕಣ್ಣಲಿ ಕಂಬನಿ ಮುತ್ತಗಿ ಮಾಡಿ
ಸಲಹೊ ಅಳಿಮಯ್ಯ ರಾಮನಿಗು ಮೇಲು
ಪ್ರೀತಿ ಕೊಟ್ಟೋನಿಗೆ ಕಟ್ಟಬೇಕು ಕಾಲು

ಚಂದನ ನೆತ್ತಿ ಮಲ್ಲಿಗೆ ಸುತ್ತಿ
ಮನೆ ಮಗನಿಗೆ ಆರತಿ ಎತ್ತಿ
ಬಾಳು ಬನವಾಯಿತು
ಇರುಳು ಬೆಳಕಾಯಿತು

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು
ಮಾವ ಮಗುವಾದನು

ತಾನೂ ತಂದಾನ ತಂದಾನ ತಾನ
ಹೇ ತಾನೂ ತಂದಾನ ತಂದಾನ ತಾನ

ಮಾವಯ್ಯ ನೀವಿಂದು ನಮಗೆ ಜೀವ
ಮನದ ತುಂಬ ನಿಮ್ಮ ಬಳ್ಳಿಯದೆ ಹೂವ
ಅಪ್ಪಯ್ಯ ನಾ ನಿನ್ನ ಋಣದ ಮೇಲೆ
ಮನಸೆ ಹೂವ ಮಾಡಿ ಹಕುವೆನು ಮಾಲೆ
ನೆನೆಕೆ ಹರಕೆ ಎಲ್ಲಾ ದೇವರಿಗೆ ಹೇಳಿ
ನಗುತ ಹೀಗೆ ನೀವು ನೂರು ಕಾಲ ಬಾಳಿ
ಹಬ್ಬದ ದೀಪ ಗಂಧದ ಧೂಪ
ಮನೆ ಹಿರಿಯರೆ ದೇವರ ರೂಪ
ಬಾಳು ಬನವಾಯಿತು
ಇರುಳು ಬೆಳಕಾಯಿತು

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು
ಮಾವ ಮಗುವಾದನು

ತಾನೂ ತಂದಾನ ತಂದಾನ ತಾನ
ಹೇ ತಾನೂ ತಂದಾನ ತಂದಾನ ತಾನ



Credits
Writer(s): Hamsalekha, S.p. Balasubrahmanyam
Lyrics powered by www.musixmatch.com

Link