Amma Amma

ಕಂದನ ಮೊದಲ ತೊದಲೇ ಅಮ್ಮಾನೇ
ಆ ಅಮ್ಮನ ಲಾಲಿಯು ಇಲ್ಲದೆ ಸಾವೇನೆ
ಭೂಮಿಯ ಮೇಲಿನ ದೇವರು ಅಮ್ಮಾನೇ
ಆ ದೇವರು ಕೂಡ ಅಮ್ಮನ ಮಗನೇನೆ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ನಮ್ಮಮ್ಮ
ಅಮ್ಮ ಅಮ್ಮ

ಹೂವಿಗೂ ಲಾಲಿ ಇದೆ
ಬಳ್ಳಿಯ ಜೋಲಿ ಇದೆ
ನಿನಗೆ ಏಕೆ ಇಲ್ಲವೋ ತಾಯಿಯು
ಗೀತಾ ಸಾರದಲೂ
ಚರಿತೆಯ ಪುಟಗಳಲೂ
ಅಮ್ಮನ ಹೆಸರೇನೆ ಮೊದಲ ಸಾಲಲಿದೆ
ಅಮ್ಮ ಅಮ್ಮ ಅಮ್ಮ ಅನ್ನೋ ಮಾತಿಗೆ
ಕೋಟಿ ದೇವರೇನೇ ತಲೆಯ ಬಾಗಿ ನಮಿಪರು
ಅಮ್ಮ ಅಮ್ಮ ಅಮ್ಮ ಅನ್ನೋ ಕೂಗಿಗೆ
ಯಮನು ಕೂಡ ತಲೆಯ ಬಾಗಿ ಶರಣು ಎನ್ನುವನು

ಅಮ್ಮ ತಾನೇ ಜೀವ
ಅಮ್ಮ ತಾನೇ ಭಾವ
ಅಮ್ಮ ತಾನೇ ದೈವ
ದೇವರ ದೇವರು
ಅಮ್ಮ ಅಮ್ಮ ಅಮ್ಮ ಅಮ್ಮ

ಬಾನಿಗೂ ಎಲ್ಲೆ ಇದೆ
ಕಡಲಿಗೂ ಕೊನೆಯು ಇದೆ
ಅಮ್ಮನ ಪ್ರೀತಿಗೆ ಕೊನೆಮೊದಲ್ಲೆಲಿದೆ
ವೇದ ಶಾಸ್ತ್ರದಲೂ
ಗದ್ಯ ಪದ್ಯದಲೂ
ಅಮ್ಮನ ಗುರುತುಗಳ ನಲುಮೆಯ ಸಾರವಿದೆ
ಅಮ್ಮ ಅಮ್ಮ ಅಮ್ಮ ಅನ್ನೋ ಪ್ರೀತಿಗೆ
ಕಾಯೋ ಸೂರ್ಯನು ಮತ್ತೆ ಹುಟ್ಟಿ ಬರುವನು
ಅಮ್ಮ ಅಮ್ಮ ಅಮ್ಮ ಅನ್ನೋ ರೀತಿಗೆ
ಶಶಿಯೇ ಕರಗಿ ಅವಳ ಪಾದ ತೊಳೆದು ನಮಿಪೆನು

ಅಮ್ಮ ತಾನೇ ಜೀವ
ಅಮ್ಮ ತಾನೇ ಭಾವ
ಅಮ್ಮ ತಾನೇ ದೈವ
ದೇವರ ದೇವರು

ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ನನ್ನಮ್ಮ
ಅಮ್ಮ ಅಮ್ಮ

ಕಂದನ ಮೊದಲ ತೊದಲೇ ಅಮ್ಮಾನೇ
ಆ ಅಮ್ಮನ ಲಾಲಿಯು ಇಲ್ಲದೆ ಸಾವೇನೆ



Credits
Writer(s): Chandru S L, Premkumar S
Lyrics powered by www.musixmatch.com

Link