Nannolave

ನನ್ನೊಲವೇ, ನನ್ನೊಲವೇ, ಕುಶಲವೇ, ಕ್ಷೇಮವೇ?
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೆ

ನನ್ನೊಲವೇ, ನನ್ನೊಲವೇ, ಕುಶಲವೇ, ಕ್ಷೇಮವೇ?
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೆ
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆ ತುಂಬೋ ಹಾಡಲ್ಲವೇ?

ನನ್ನೊಲವೇ, ನನ್ನೊಲವೇ, ಕುಶಲವೇ, ಕ್ಷೇಮವೇ?
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೆ
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆ ತುಂಬೋ ಹಾಡಲ್ಲವೇ?

ನನ್ನೊಲವೇ, ನನ್ನೊಲವೇ, ಕುಶಲವೇ, ಕ್ಷೇಮವೇ?
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೆ

ಬೆಳ್ಳಿ ಬಾನಂಚಲಿ, ಚೆಲ್ಲೋ ಹೂ ಮಳೆಯಲಿ
ಅವಳ ಹೆಜ್ಜೆಯನು ಹುಡುಕಾಡಿದೆ
ಮಳೆಯ ಹನಿಹನಿಯೆಲ್ಲ ಹೂವ ಎದೆಗೂಡಲಿ
ಮರೆತು ಸವಿಜೇನ ಹನಿಯಾಗಿದೆ
ಜೀವ ಅಲೆಯಾಗಿ ಅಲೆದಲೆಯೋ ಸಮಯ
ಮರೆತು ಮರೆಯಲ್ಲಿ ಮಾತಾಡೋ ಹೃದಯ
ಮಾತು ಕಿವಿಯಲ್ಲಿದೆ
ಗುರುತು ಮನಸಲ್ಲಿದೆ
ಇದೇ ಕಿವಿ ತುಂಬೋ ಹಾಡಲ್ಲವೇ?

ನನ್ನೊಲವೇ, ನನ್ನೊಲವೇ, ಕುಶಲವೇ, ಕ್ಷೇಮವೇ?
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೆ

ನನ್ನ ಉಸಿರಲ್ಲಿರೋ ಒಂಟಿ ಕೊಳಲ ಧ್ವನಿ
ನಿನ್ನ ಉಸಿರಿನ ಸ್ವರವಾಗಿದೆ
ಉಸಿರ ಸ್ವರವೆಲ್ಲವ ಬೆರೆಸಿ ಹಾಡಿದರೆ
ಅದೇ ಅನುರಾಗ ವರವಾಗದೇ?
ಕೋಟಿ ಕನಸುಗಳ ಕನ್ನಡಿಯೇ ನೀನು
ನಿನ್ನ ಕನ್ನಡಿಯ ಕಣ್ಗಳಲಿ ನಾನು
ಸ್ವಂತ ಕಥೆಯಾಗಲಿ
ದಂತ ಕಥೆಯಾಗಲಿ
ಇದೇ ಎದೆ ತುಂಬೋ ಹಾಡಲ್ಲವೇ?

ನನ್ನೊಲವೇ, ನನ್ನೊಲವೇ, ಕುಶಲವೇ, ಕ್ಷೇಮವೇ?
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೆ

ನನ್ನೊಲವೇ, ನನ್ನೊಲವೇ, ಕುಶಲವೇ, ಕ್ಷೇಮವೇ?
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೆ
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆ ತುಂಬೋ ಹಾಡಲ್ಲವೇ?

ನನ್ನೊಲವೇ, ನನ್ನೊಲವೇ, ಕುಶಲವೇ, ಕ್ಷೇಮವೇ?
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೆ
ನಿನ್ನ ಅನುರಾಗದ ಒಂದು ಅನುಪಲ್ಲವಿ
ನನ್ನ ಎದೆ ತುಂಬೋ ಹಾಡಲ್ಲವೇ?

ನನ್ನೊಲವೇ, ನನ್ನೊಲವೇ, ಕುಶಲವೇ, ಕ್ಷೇಮವೇ?
ನಿನ್ನೊಲವೇ ನನ್ನೊಳಗೆ ಜೀವನ ಚೈತ್ರವೆ



Credits
Writer(s): Kalyan K, Rajesh Ramanath
Lyrics powered by www.musixmatch.com

Link