Prema Chandrama (Pathos Version)

ಪ್ರೇಮ ಚಂದ್ರಮ

ಕೈಗೆ ಸಿಗುವುದೇ

ಹೇಳೇ ತಂಗಾಳಿ
ನೀ ಹೇಳೆ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ
ಮನಸಾರ ಮೆಚ್ಚಿಕೊಳುವೆ
ಹೃದಯಾನ ಬಿಚ್ಚಿಕೊಡುವೆ
ಪ್ರತಿ ಜನ್ಮ ಜನ್ಮದಲೂ
ನಿನ್ನ ಕಾಯುತಲೇ ಇರುವೆ

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ

ಬಾನಲಿ ಹುಣ್ಣಿಮೆಯಾದರೆ ನೀ
ಸವೆಯ ಬೇಡ ಸವೆಯುವೆ ನಾ
ಮೇಣದ ಬೆಳಕೇ ಆದರೆ ನೀ
ಕರಗ ಬೇಡ ಕರಗುವೆ ನಾ
ಹೂದೋಟವೆಯಾದರೂ ನೀನು
ಹೂಗಳ ಬದಲು ಉದುರುವೆ ನಾ
ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ

ಈ ಪ್ರತಿರೂಪ ಬಿಡಿಸಲು ನಾ
ನೆತ್ತರಲೇ ಬಣ್ಣವನಿಡುವೆ
ಈ ಪ್ರತಿಬಿಂಬ ಕೆತ್ತಲು ನಾ
ಎದೆಯ ರೋಮದ ಉಳಿಯಿಡುವೆ
ಕವಿತೆಯ ಹಾಗೆ ಬರೆದಿಡಲು
ಉಸಿರನೇ ಬಸಿದು ಪದವಿಡುವೆ
ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ
ಮನಸಾರೆ ಮೆಚ್ಚಿಕೊಳುವೆ
ಹೃದಯಾನ ಬಿಚ್ಚಿಕೊಡುವೆ
ಪ್ರತಿ ಜನ್ಮ ಜನ್ಮದಲೂ
ನಿನ್ನ ಕಾಯುತಲೇ ಇರುವೆ

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ



Credits
Writer(s): Kalyan K, Rajesh Ramanath
Lyrics powered by www.musixmatch.com

Link