Naa E Sanjage (Female Version)

ನಾ ಈ ಸಂಜೆಗೆ ಆ ಬಾನನು
ತಾರೆ ಜೊತೆ ಸೇರಿ ಅಲಂಕರಿಸಲೇ
ನೀ ಮರೆತಿರುವ ಕಥೆಯೊಂದನು
ನೆನಪಿನ ಬುತ್ತಿಯಲಿ ಹುಡುಕಿ ಬಿಡಿಸಿ ನಾ ಹೇಳಲೇ

ಗೋಡೆಯ ಮೇಲೆ ನೀ ಬರೆದಿರುವ
ಅಂಗೈಯಿನ ಗುರುತಿನಲಿ ರೇಖೆಗಳು
ನೀ ನಡೆವ ದಾರಿಯನು ಅನುಕರಿಸಿದೆ
ಆ ಒಗಟಿನ ಜಾಲವ ನಾ ಬಿಡಿಸಲೇ

ನೀ ಕಡಲ ಜೀವ, ನಾ ಅಲೆಯ ಭಾವ
ನಿನ್ನಲ್ಲೇ ನಾನಿರುವೆ, ನೀ ನನ್ನೆಲ್ಲಿ ಹುಡುಕುವೆ
ಜೋರಾಗಿ ಕೂಗೊಮ್ಮೆ, ನಾ ನಿನ್ನೊಳ ಪ್ರತಿಧ್ವನಿಸುವೆ

ನಾ ಈ ಸಂಜೆಗೆ ಆ ಬಾನನು
ತಾರೆ ಜೊತೆ ಸೇರಿ ಅಲಂಕರಿಸಲೇ

ಗೋಡೆಯ ಮೇಲೆ ನೀ ಬರೆದಿರುವ
ಅಂಗೈಯಿನ ಗುರುತಿನಲಿ ರೇಖೆಗಳು
ನೀ ನಡೆವ ದಾರಿಯನು ಅನುಕರಿಸಿದೆ
ಆ ಒಗಟಿನ ಜಾಲವ ನಾ ಬಿಡಿಸಲೇ



Credits
Writer(s): Charan Raj, Rakshit Shetty
Lyrics powered by www.musixmatch.com

Link