Adudanariye Hodudanariye Taala Maana Basavanna

ಕೂಡಲಸಂಗಮದೇವ
ಆದುದನರಿಯೆ, ಹೋದುದನರಿಯೆ
ಬಂದುದನರಿಯೆ, ನಿಂದುದನರಿಯೆ
ಒಳಗನರಿಯೆ, ಹೊರಗನರಿಯೆ
ಇಹವನರಿಯೆ, ಪರವನರಿಯೆ
ಭಾವವನರಿಯೆ, ನಿರ್ಭಾವವನರಿಯೆ
ಶೂನ್ಯವನರಿಯೆ, ನಿಃಶೂನ್ಯವನರಿಯೆ
ಕೂಡಲಸಂಗಮದೇವಯ್ಯಾ
ಇವೆಲ್ಲವ ಮಾಡಿ ಕೂಡಿದಾತ ಮಡಿವಾಳ ಬಲ್ಲನಾಗಿ ನಾನೇನೆಂದೂ ಅರಿಯೆನಯ್ಯಾ

ತಾಳಮಾನ ಸರಿಸಮನರಿಯೆ
ಓಜೆ ಬಜಾವಣೆಯ ಲೆಕ್ಕವನರಿಯೆ
ಅಮೃತಗಣ ದೇವಗಣವನರಿಯೆ
ಕೂಡಲಸಂಗಮದೇವಾ
ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ
ಕೂಡಲಸಂಗಮದೇವ



Credits
Lyrics powered by www.musixmatch.com

Link